ದ್ವಿಚಕ್ರ ವಾಹನ ಮೋಟಾರು ಸ್ಪರ್ಧೆ : ಮುನ್ನ ತಂಡಕ್ಕೆ ಚಾಂಪಿಯನ್ ಟ್ರೋಫಿ

NANJANAGUDU
ನಂಜನಗೂಡು, ಆ.30- ನಗರದ ಫ್ರೆಂಡ್ಸ್ ಅಸೋಸಿಯೇಷನ್‍ರವರ ಆಶ್ರಯದಲ್ಲಿ ಅಂತರರಾಜ್ಯ ಮಟ್ಟದ ದ್ವಿಚಕ್ರ ವಾಹನ ಮೋಟಾರು ಸ್ಪರ್ಧೆಯು ರೋಮಾಂಚನಕಾರಿಯಾಗಿ ನಡೆದು ಚಾಮರಾಜನಗರದ ಮುನ್ನ ಅವರ ತಂಡ ಚಾಂಪಿಯನ್ ಟ್ರೋಫಿ ಮತ್ತು ನಗದು ಬಹುಮಾನ ಪಡೆಯುವುದರೊಂದಿಗೆ ಬೈಕ್ ಕ್ರೀಡಾಭಿಮಾನಿಗಳ ರಸದೌತಣ ಮುಕ್ತಾಯಗೊಂಡಿತು.ಕೈಗಾರಿಕಾ ಪ್ರದೇಶದಲ್ಲಿರುವ ಜಮೀನೊಂದರಲ್ಲಿ ನಡೆದ ಈ ಮೋಟಾರ್ ಬೈಕ್ ರ್ಯಾಲಿಯಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಕೇರಳ ರಾಜ್ಯಗಳಿಂದ ಸುಮಾರು 276 ಸ್ಪರ್ಧಿಗಳು ಭಾಗವಹಿಸಿದ್ದು, ಅದರಲ್ಲಿ 97ಸ್ಪರ್ಧಿಗಳೂ ಸುಮಾರು 2 ಲಕ್ಷ ರೂ.ಗಳ ಬಹುಮಾನಗಳನ್ನು ಬಾಚಿಕೊಂಡರು.

ಸಮಾರಂಭದಲ್ಲಿ ವಿಜೇತರಾದವರಿಗೆ ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್ ಟ್ರೋಫಿ ಮತ್ತು ನಗದು ಬಹುಮಾನವನ್ನು ನೀಡಿ ಕ್ರೀಡೆಗೆ ಹೆಸರು ಪಡೆದಿರುವ ಈ ಕ್ಷೇತ್ರದಲ್ಲಿ ಕ್ರೀಡಾಭಿವೃದ್ಧಿಗೆ ಕೋಟ್ಯಾಂತರ ರೂಗಳ ಹಣ ಬಿಡುಗಡೆ ಮಾಡಿದ್ದು ಶೀಘ್ರದಲ್ಲೆ ಕ್ರೀಡಾಭಿಮಾನಿಗಳ ಬೇಡಿಕೆ ಈಡೇರಲಿದೆ ಎಂದರು. ಇದೇ ಸಂದರ್ಭದಲ್ಲಿ ಎರಡನೇ ಮತ್ತು ಮೂರನೆ ಸ್ಥಾನಗಳ ಬಹುಮಾನವನ್ನು ಮಾಜಿ ಪುರಸಭಾ ಉಪಾಧ್ಯಕ್ಷ ಹಾಗೂ ಫ್ರೆಂಡ್ಸ್ ಅಸೋಸಿಯೇಷನ್‍ನ ಅಧ್ಯಕ್ಷ ಎನ್.ಇಂದ್ರ ವಿತರಿಸಿದರು.  ಮೂಡಾ ಅಧ್ಯಕ್ಷ ಕೆ.ಆರ್.ಮೋಹನ್ ಕುಮಾರ್, ಯು.ಆರ್.ಪದ್ಮನಾಭರಾವ್, ಅಬ್ದುಲ್ ಖಾದಿರ್, ಮಾಜಿ ಪುರಸಭಾ ಉಪಾಧ್ಯಕ್ಷ ಎನ್.ಇಂದ್ರ, ಅಧ್ಯಕ್ಷ ಪಿ.ಶ್ರೀನಿವಾಸ್ ಜವಳಿ ವರ್ತಕರ ಸಂಘದ ಅಧ್ಯಕ್ಷ ಜಿ.ಎಸ್.ಗೋವಿಂದರಾಜು, ಸಂಸದ ಧೃವನಾರಾಯಣ್, ನಗರಸಭಾ ಸದಸ್ಯ ಕೆ.ನಟೇಶ್, ಮೋಟಾರ್ ಬೈಕ್ ತಜ್ಞ ಎಂ.ಟಿ.ಸಿ.ನಿರ್ದೇಶಕ ಮುನ್ನ ಮತ್ತಿತರರು ಭಾಗವಹಿಸಿದ್ದರು.

 

► Follow us on –  Facebook / Twitter  / Google+

Sri Raghav

Admin