ಧರ್ಮಶಾಲಾದಲ್ಲಿ ಕಾಂಗರೂಗಳ ಬೇಟೆಯಾಡಿ ಸರಣಿ ಗೆದ್ದ ಟೀಮ್ ಇಂಡಿಯಾ

Cricket--01

ಧರ್ಮಶಾಲಾ, ಮಾ.28- ಇಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯವನ್ನು 8 ವಿಕೆಟ್‍ಗಳ ಅಂತರದಿಂದ ಮಣಿಸುವ ಮೂಲಕ ಭಾರತ ಸರಣಿ ಜಯವನ್ನು ಸಾಧಿಸಿದೆ. ಕೊನೆಯ ದಿನದ ಆಟದಲ್ಲಿ 2 ವಿಕೆಟ್ ಕಳೆದುಕೊಂಡು ಗೆಲುವಿನ ಸವಾಲಾಗಿದ್ದ 107 ರನ್‍ಗಳನ್ನು ಕಲೆಹಾಕಿ ಗೆಲುವಿನ ಕೇಕೆ ಹಾಕಿದೆ.  ಬಾರ್ಡರ್-ಗವಾಸ್ಕರ್ ಟೂರ್ನಿಯ ನಾಲ್ಕು ಟೆಸ್ಟ್ ಪಂದ್ಯಗಳ ಪೈಕಿ ನಾಲ್ಕನೇ ಟೆಸ್ಟ್ ಪಂದ್ಯ ಧರ್ಮಶಾಲಾದಲ್ಲಿ ನಡೆದಿದ್ದು, ಈ ಪಂದ್ಯದಲ್ಲಿ ಭಾರತ 8 ವಿಕೆಟ್ ಗಳಿಂದ ಜಯ ಸಾಧಿಸಿದೆ.

ಹಿಮಾಚಲ ಪ್ರದೇಶ ರಾಜ್ಯ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಮುಕ್ತಾಯವಾದ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಭಾರತ 8 ವಿಕೆಟ್‍ಗಳ ಭರ್ಜರಿ ಜಯ ಸಾಧಿಸುವುದರೊಂದಿಗೆ   ಸರಣಿಯನ್ನು 2-1 ಅಂತರದಿಂದ ಗೆಲುವು ಸಾಧಿಸಿದ್ದು, ಸತತ 7ನೆ ಬಾರಿ ಟೆಸ್ಟ್ ಸರಣಿ ಗೆದ್ದಿದೆ ಎಂಬ ಹೆಗ್ಗಳಿಕೆಗೆ ಭಾರತ ತಂಡ ಪಾತ್ರವಾಯಿತು. ವಿಕೆಟ್ ನಷ್ಟವಿಲ್ಲದೆ 13 ರನ್‍ಗಳಿಂದ ದಿನದಾಟ ಆರಂಭಿಸಿದ ಭಾರತಕ್ಕೆ ಕೇಲ್ ರಾಹುಲ್ (51) ಮತ್ತು ಹಂಗಾಮಿ ನಾಯಕ (38) ರನ್‍ಗಳ ನೆರವಿನಿಂದ 2 ವಿಕೆಟ್ ಕಳೆದುಕೊಂಡು ಸಾಧಾರಣ ಗುರಿ ಮುಟ್ಟಿತ್ತು.

13 ರನ್‍ನಿಂದ ಆಟ ಮುಂದುವರಿಸಿದ ರಾಹುಲ್ ಒತ್ತಡವಿಲ್ಲದೆ ಅತ್ಯಮೋಘ ಆಟ ಪ್ರದರ್ಶಿಸಿ 76 ಎಸೆತಗಳಲ್ಲಿ 9 ಬೌಂಡರಿ ಸಹಿತ ಅರ್ಧ ಶತಕ ದಾಖಲಿಸಿದರು.
ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡರೂ ಒತ್ತಡಕ್ಕೆ ಸಿಲುಕದೆ ಹಂಗಾಮಿ ನಾಯಕ ರಹಾನೆ 27 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ನೆರವಿನೊಂದಿಗೆ ಪಟಪಟನೆ 38 ರನ್ ಸೇರಿಸಿ ತಂಡದ ಗೆಲುವಿಗೆ ಯತ್ನಿಸಿದರು.

ತಂಡದ ಮೊತ್ತ 46 ರನ್ ಆಗಿದ್ದಾಗ ಮುರಳಿ ವಿಜಯ್ 8 ರನ್ ಗಳಿಸಿ ಪ್ಯಾಟ್ ಕಿಮಿಕ್ಸ್ ಬೌಲಿಂಗ್‍ನಲ್ಲಿ ವಿಕೆಟ್ ಕೀಪರ್ ವಡೆಗೆ ಕ್ಯಾಚಿತ್ತು ನಿರ್ಗಮಿಸಿದರು. ವಿಜಯ್ ಔಟಾಗುತ್ತಿದ್ದಂತೆ ಅದೇ ಮೊತ್ತಕ್ಕೆ ಪೂಜಾರ (0) ರನ್‍ಔಟ್ ಬಲೆಗೆ ಬಲಿಯಾದರು. ಈ ನಡುವೆ ಒತ್ತಡಕ್ಕೆ ಸಿಲುಕಿದ ಭಾರತ ರಾಹುಲ್ ಮತ್ತು ರಹಾನೆ ಜೋಡಿಯು ಎರಡನೆ ವಿಕೆಟ್ ಜತೆಯಾಟದಲ್ಲಿ 60 ರನ್ ಕಲೆ ಹಾಕಿ ಆಸಿಸ್ ನೀಡಿದ ಸಾಧಾರಣ ಮೊತ್ತವನ್ನು ಗುರಿ ಮುಟ್ಟಿದರು.

 

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin