ಧರ್ಮಶಾಲಾದಲ್ಲಿ ನಿರ್ಣಾಯಕ ಟೆಸ್ಟ್ ಪಂದ್ಯ : ಆಸೀಸ್ ಉತ್ತಮ ಆರಂಭ

Dharmashala-Test

ಧರ್ಮಶಾಲಾ,ಮಾ.25-ಇಲ್ಲಿನ ಹಿಮಾಚಲಪ್ರದೇಶ ಕ್ರಿಕೆಟ್ ಸಂಸ್ಥೆ(ಎಚ್ ಪಿಸಿಎ) ಕ್ರೀಡಾಂಗಣದಲ್ಲಿ ಆರಂಭವಾಗಿರುವ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ 4ನೇ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತಂಡ ಉತ್ತಮ ಆರಂಭ ಪಡೆದಿದೆ. ಟಾಸ್ಕ್ ಗೆದ್ದು ಆಸೀಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, ಆರಂಭದಲ್ಲೇ ಇನ್ನಿಂಗ್ಸ್‍ನ 1.4 ಓವರ್‍ನಲ್ಲಿ ಮ್ಯಾಟ್ ರೈನ್‍ಷಾ(1) ಅವರು ಉಮೇಶ್ ಯಾದವ್ ಅವರ ಬೌಲಿಂಗ್‍ಗೆ ಬೋಲ್ಡ್ ಆಗಿ ಆರಂಭದಲ್ಲೇ ಆಘಾತ ಅನುಭವಿಸಿತು.

ಸ್ಮಿತ್ ಅರ್ಧಶತಕ:

ಟೂರ್ನಿಯಲ್ಲಿ ಅದ್ಭುತ ಪಾರ್ಮ್‍ನಲ್ಲಿರುವ ನಾಯಕ ಸ್ಟೀವನ್ ಸ್ಮಿತ್ ಭರ್ಜರಿ ಅರ್ಧಶತಕ ಬಾರಿಸಿದರು. ಆರಂಭದಲ್ಲಿ ಪ್ರಮುಖ ವಿಕೆಟ್ ಕಳೆದುಕೊಂಡರೂ ಒತ್ತಡಕ್ಕೊಳಗಾಗದೆ ಏಕದಿನ ಪಂದ್ಯದಂತೆ ರನ್ ಬಾರಿಸಿದರು.  ಎರಡನೇ ವಿಕೆಟ್ ಜೊತೆಯಾಟದಲ್ಲಿ ಡೇವಿಡ್ ವಾರ್ನರ್ ಅವರ ಅಗತ್ಯ ಸಾಥ್ ತೆಗೆದುಕೊಂಡು ಅರ್ಧಶತಕ ಬಾರಿಸಿ ತಂಡದ ನೆರವಿಗೆ ನಿಂತರು.  ಆರಂಭದಲ್ಲೇ ಮೊದಲ ವಿಕೆಟ್ ಕಬಳಿಸಿದ ಭಾರತದ ಬೌಲರ್‍ಗಳು ಬಳಿಕ ಆಸೀಸ್ ಬ್ಯಾಟ್ಸ್‍ಮನ್‍ಗಳನ್ನು ನಿಯಂತ್ರಿಸುವಲ್ಲಿ ವಿಫಲರಾದರು.  ಪತ್ರಿಕೆ ಮುದ್ರಣವಾಗುವ ಸಮಯದಲ್ಲಿ ಆಸೀಸ್ 28.1 ಓವರ್‍ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 120 ಪ್ರೇರಿಸಿತ್ತು. ವಿರಾಮಕ್ಕೂ ಮುನ್ನ ಡೇವಿಡ್ ವಾರ್ನರ್ 48, ಸ್ಟೀವನ್ ಸ್ಮಿತ್ 67 ರನ್ ಕಲೆಹಾಕಿ ತಂಡವನ್ನು ಮುನ್ನೆಡೆಸಿದ್ದಾರೆ.

ನಾಯಕ ವಿರಾಟ್ ಕೊಹ್ಲಿ ಔಟ್:

ಭುಜ ನೋವಿನಿಂದ ಬಳಲುತ್ತಿರುವ ನಾಯಕ ವಿರಾಟ್ ಕೊಹ್ಲಿ 4ನೇ ಅಥವಾ ಅಂತಿಮ ಪಂದ್ಯದಿಂದ ಹೊರಗುಳಿದಿದ್ದಾರೆ. ಕೊಹ್ಲಿ ಬದಲಿಗೆ ಕುಲದೀಪ್ ಯಾದವ್ ಕಣಕ್ಕಿಳಿದಿದ್ದು , ಹಂಗಾಮಿ ನಾಯಕನಾಗಿ ಅಜಿಂಕ್ಯಾ ರಹಾನೆ ತಂಡವನ್ನು ಮುನ್ನಡೆಸಿದ್ದಾರೆ.   ಉಭಯ ತಂಡಗಳು ಸರಣಿಯಲ್ಲಿ ಈಗಾಗಲೆ 1-1 ಸಮಬಲ ಸಾಧಿಸಿದ್ದು , ಈ ಪಂದ್ಯವು ಮಹತ್ವದಾಗಿದೆ. ಹೀಗಾಗಿ ಎರಡೂ ತಂಡದ ಆಟಗಾರರು ಭಾರೀ ಪೈಪೋಟಿವೊಡ್ಡಿ ಆಟವಾಡುತ್ತಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin