ಧಾರ್ಮಿಕ ಪೂಜೆ ಕಾರ್ಯ ಹಿನ್ನೆಲೆಯಲ್ಲಿ ಅರಮನೆ ಪ್ರವೇಶಕ್ಕೆ ನಿರ್ಬಂಧ

Mysuru-Palace

ಮೈಸೂರು,ಸೆ.17-ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಮೈಸೂರು ಅರಮನೆಯಲ್ಲಿ ರಾಜ ಮನೆತನದವರು ಧಾರ್ಮಿಕ ಪೂಜಾ ಕಾರ್ಯ ಕೈಗೊಳ್ಳುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ಈ ಕೆಳಕಂಡ ದಿನಗಳಂದು ಪ್ರವೇಶ ನಿರ್ಬಂಧ ಹೇರಲಾಗಿದೆ. ಸೆ.21ರಂದು ಮಧ್ಯಾಹ್ನ 1.30ಕ್ಕೆ ಅರಮನೆ ಒಳ ಆವರಣಕ್ಕೆ ಪ್ರವೇಶವನ್ನು ನಿರ್ಬಂಧಸಲಾಗಿದೆ. ಸೆ.29ರಂದು ಮಧ್ಯಾಹ್ನ 1.30ರವರೆಗೆ ಅರಮನೆ ಒಳ ಮತ್ತು ಹೊರ ಆವರಣದ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಸೆ.30ರಂದು ಪೂರ್ತಿ ದಿನ ಮೈಸೂರು ಒಳ-ಹೊರ ಆವರಣ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಪಾಸ್ ಹೊಂದಿರುವವರಿಗೆ ದಸರಾ ಟಿಕೆಟ್ ಪಡೆದವರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಅ.14ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆವರೆಗೆ ಅರಮನೆಯ ಒಳ ಆವರಣದ ನೆಲ ಅಂತಸ್ತು ಹಾಗೂ ಅರಮನೆಯ ಹೊರ ಆವರಣಕ್ಕೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ.

Sri Raghav

Admin