ನಂದಿ ಗಿರಿಧಾಮದಲ್ಲಿ ಫುಲ್ ಟ್ರಾಫಿಕ್ ಜಾಮ್

Nandi-Hills--02

ಚಿಕ್ಕಬಳ್ಳಾಪುರ, ಅ.1-ಪ್ರವಾಸಿ ಸ್ಥಳವಾದ ನಂದಿಗಿರಿಧಾಮದಲ್ಲಿ ಸೂರ್ಯೋದಯ ವೀಕ್ಷಿಸಲು ಆಗಮಿಸಿದ್ದ ಪ್ರವಾಸಿಗರ ವಾಹನಗಳಿಂದಾಗಿ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಆಗಿದ್ದು ಕಂಡು ಬಂತು. ದಸರಾ ನಿಮಿತ್ತ ಸಾಲು ಸಾಲು ರಜೆ ಹಾಗೂ ಇಂದು ಭಾನುವಾರವಾದ್ದರಿಂದ ಮುಂಜಾನೆಯಿಂದಲೇ ಕಾರುಗಳಲ್ಲಿ ಮಕ್ಕಳೊಂದಿಗೆ ಕುಟುಂಬಸ್ಥರು ಆಗಮಿಸಿದ್ದರಲ್ಲದೆ, ಬೈಕ್‍ಗಳಲ್ಲಿ ಸ್ನೇಹಿತರೊಂದಿಗೆ ಹೆಚ್ಚಿನ ಯುವಕರು, ಯುವತಿಯರು ಆಗಮಿಸಿದ್ದರು.

ಸೂರ್ಯೋದಯ ವೀಕ್ಷಿಸಲು ಆಗಮಿಸಿದ್ದ ಮಕ್ಕಳು ನದಿಗಿರಿಧಾಮದಲ್ಲಿ ಕುಣಿದು ಕುಪ್ಪಳಿಸಿದರು. ನಂದಿಗಿರಿಧಾಮದಲ್ಲಿ ಮಂಜಿನ ವಾತಾವರಣ ಹಾಗೂ ಸೂರ್ಯೋದಯ ವೀಕ್ಷಿಸಲು ನಿರೀಕ್ಷೆಗೂ ಮೀರಿದ ಜನ ಸಂದಣಿ ಇದ್ದುದರಿಂದ ವಾಹನಗಳ ಸಂಖ್ಯೆಯೂ ಅಧಿಕವಾಗಿತ್ತು.
ಬೆಳ್ಳಂಬೆಳಗ್ಗೆಯೇ ಟ್ರಾಫಿಕ್ ಜಾಮ್‍ನಿಂದ ವಾಹನ ಸವಾರರು ಪರದಾಡುವಂತಾಯಿತು. ಸಂಚಾರಿ ಪೆÇಲೀಸರಂತೂ ಟ್ರಾಫಿಕ್ ಸರಿಪಡಿಸಲು ಹರಸಾಹಸ ಪಡುವಂತಾಯಿತು.

Sri Raghav

Admin