ನಕಲಿ ಗುರುತು ಪತ್ರ ಬಳಸಿ ಭಾರೀ ಕಾಳಧನ ಪರಿವರ್ತನೆ ಮಾಡಿದ ಚಾಯ್ ವಾಲಾ ಬಂಧನ
ಸೂರತ್, ಜ.20-ಹಣ ದುರ್ಬಳಕೆ ಮತ್ತು 1,000 ನಕಲಿ ಗುರುತು ಪತ್ರಗಳನ್ನು ಬಳಸಿ ಅಕ್ರಮವಾಗಿ ಒಂದು ಕೋಟಿ ರೂ.ಗಳ ಹಳೆ ನೋಟುಗಳನ್ನು ಹೊಸ ಕರೆನ್ಸಿಗೆ ಬಳಸಿಕೊಂಡ ಆರೋಪದ ಮೇಲೆ ಟೀ ಮಾರುವ ಸೂರತ್ ಮೂಲದ ಫೈನಾನ್ಷಿಯರ್ ಕಿಶೋರ್ ಭಜಿಯಾವಾಲಾನನ್ನು ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಬಂಧಿಸಿದ್ದಾರೆ. ಸೂರತ್ನಲ್ಲಿ ನಿನ್ನೆ ರಾತ್ರಿ 11.45ರಲ್ಲಿ ಹಣ ದುರ್ಬಳಕೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿ 41 ವರ್ಷದ ಜಿಗ್ನೇಶ್ ಕಿಶೋರ್ ಭಾಯ್ ಭಜಿಯಾವಾಲಾನನ್ನು ಬಂಧಿಸಲಾಗಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ. ಸಿಬಿಐ ಸಲ್ಲಿಸಿದ್ದ ಎಫ್ಐಆರ್ ಆಧಾರದ ಮೇಲೆ ಭಜಿಯಾವಾಲಾ ಮತ್ತು ಆತನ ಕುಟುಂಬದ ಕೆಲವು ಸದಸ್ಯರ ವಿರುದ್ಧ ಜಾರಿ ನಿರ್ದೇಶನಾಲಯದ ಕ್ರಿಮಿನಲ್ ದೋಷಾರೋಪ ಪಟ್ಟಿ ದಾಖಲಿಸಿಕೊಂಡಿತ್ತು.
ನೋಟು ಅಮಾನ್ಯದ ನಂತರ ಕಾಳಧನ ಪತ್ತೆ ಮಾಡಲು ಕಳೆದ ಡಿಸೆಂಬರ್ನಲ್ಲಿ ನಡೆದ ಕಾರ್ಯಾಚರಣೆಯ ಭಾಗವಾಗಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಭಾರೀ ಪ್ರಮಾಣದ ನಗದು ಮತ್ತು ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದರು.