ನಕ್ಸಲರ ಜೊತೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರಿಗೆ ಗಾಯ

Naxal

ರಾಯ್‍ಪುರ್, ಮೇ 14-ನಕ್ಸಲರ ಜೊತೆ ಇಂದು ನಡೆದ ಗುಂಡಿನ ಚಕಮಕಿಯಲ್ಲಿ ಜಿಲ್ಲಾ ಮೀಸಲು ಸಮೂಹದ(ಜಿಆರ್‍ಜಿ) ಇಬ್ಬರು ಯೋಧರು ತೀವ್ರ ಗಾಯಗೊಂಡಿರುವ ಘಟನೆ ಛತ್ತೀಸ್‍ಗಢದ ಬಿಜಾಪುರ್ ಜಿಲ್ಲೆಯಲ್ಲಿ ನಡೆದಿದೆ.   ಬಿಜಾಪುರ್ ಜಿಲ್ಲೆಯ ತಿಮರ್‍ಪುರ್-ಬಸಗುಡದ ಅರಣ್ಯ ಪ್ರದೇಶದಲ್ಲಿ ಇಂದು ಬೆಳಗ್ಗೆ 10 ಗಂಟೆಯಲ್ಲಿ ಈ ಗುಂಡಿನ ಚಕಮಕಿ ನಡೆದಿದೆ. ಮಾವೋವಾದಿಗಳ ಜೊತೆ ಸಿಆರ್‍ಪಿಎಫ್‍ನ ಕೋಬ್ರಾ ಕಮ್ಯಾಂಡೋಗಳ ನೇತೃತ್ವದ ಭದ್ರತಾ ಪಡೆ ನಡೆಸಿದ ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರಿಗೆ ಗಾಯಗಳಾಗಿವೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.ಭಾರೀ ಸ್ಪೋಟಕ, ಶಸ್ತ್ರಾಸ್ತ್ರಗಳ ವಶ : ಜಾರ್ಖಂಡ್‍ನ ಸುಕ್ಮಾ ಅರಣ್ಯ ಪ್ರದೇಶದಲ್ಲಿ ಸಿಆರ್‍ಪಿಎಫ್ ಮತ್ತು ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ನಕ್ಸಲರ ಅಡಗುತಾಣವೊಂದರಿಂದ ಭಾರೀ ಪ್ರಮಾಣದ ಸ್ಫೋಟಕಗಳು, ಶಸ್ತ್ರಾಸ್ತ್ರಗಳು ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin