ನಕ್ಸಲೀಯರ ದಾಳಿಗೆ ಬಲಿಯಾದ 25 ಹುತಾತ್ಮ ಯೋಧರಿಗೆ ಅಂತಿಮ ನಮನ

Naxal-Attack
ರಾಯ್‍ಪುರ, ಏ. 25- ಛತ್ತೀಸ್‍ಗಢದ ದಸ್ತರ್ ಪ್ರಾಂತ್ಯದ ಸುಖ್ಮಾ ಜಿಲ್ಲೆಯ ಕಾಲಾಪತ್ತರ್ ಅರಣ್ಯ ಪ್ರದೇಶದಲ್ಲಿ ನಕ್ಸಲೀಯರ ದಾಳಿಗೆ ಬಲಿಯಾದ ಸಿಆರ್‍ಪಿಎಫ್‍ನ 25 ಯೋಧರಿಗೆ ಕೇಂದ್ರ ಗೃಹ ಸಚಿವ ರಾಜನಾಥ್‍ಸಿಂಗ್ , ಮುಖ್ಯಮಂತ್ರಿ ರಮಣ್‍ಸಿಂಗ್ ಸೇರಿದಂತೆ ಅನೇಕ ಗಣ್ಯರು ಅಂತಿಮ ನಮನ ಸಲ್ಲಿಸಿದರು.ಕಾಲಾಪತ್ತರ್‍ನಿಂದ ವಿಶೇಷ ಹೆಲಿಕಾಪ್ಟರ್ ಮೂಲಕ ಹುತಾತ್ಮ ಯೋಧರ ಪಾರ್ಥೀವ ಶರೀರವನ್ನು ರಾಯ್‍ಪುರಕ್ಕೆ ತರಲಾಯಿತು.
ಶವ ಪೆಟ್ಟಿಗೆಗಳ ಮೇಲೆ ಭಾರತದ ತ್ರಿವರ್ಣ ಧ್ವಜವನ್ನು ಹೊದಿಸಿ ಸಾರ್ವಜನಿಕರ ದರ್ಶನಕ್ಕೀಡಲಾಗಿತ್ತು.ದೆಹಲಿಯಿಂದ ಆಗಮಿಸಿದ ರಾಜನಾಥ್‍ಸಿಂಗ್, ಹುತಾತ್ಮ ಯೋಧರಿಗೆ ಅಂತಿಮ ನಮನ ಸಲ್ಲಿಸಿದರು.

yoda
ಮೃತ ಯೋಧರ ಗೌರವಾರ್ಥ 21 ಕುಶಾಲು ತೋಪುಗಳನ್ನು ಹಾರಿಸ ಲಾಯಿತು. ನಂತರ ಕಳೇಬರಹಗಳನ್ನು ಅಂತಿಮ ಸಂಸ್ಕಾರಕ್ಕಾಗಿ ಯೋಧರ ತವರೂರುಗಳಿಗೆ ಕಳುಹಿಸಲಾಯಿತು.ಆಯಾ ಸ್ಥಳಗಳಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಹುತಾತ್ಮ ಯೋಧರ ಅಂತ್ಯ ಸಂಸ್ಕಾರ ನಡೆಯಲಿದೆ.
25 ಯೋಧರ ಹತ್ಯಾಕಾಂಡದ ಬಗ್ಗೆ ರಾಯ್‍ಪುರ ಸೇರಿದಂತೆ ರಾಜ್ಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಹುತಾತ್ಮ ಯೋಧರ ಕುಟುಂಬಗಳಿಗೆ ಸಾರ್ವಜನಿಕರು ಸಾಂತ್ವನ ಹೇಳುತ್ತಿದ್ದಾರೆ. ಮಾವೋವಾದಿ ನಕ್ಸಲರ ದುಷ್ಕ0ತ್ಯಗಳ ಬಗ್ಗೆ ಕುದ್ರರಾಗಿರುವ ಸಾರ್ವಜನಿಕರು ಮಾವೋವಾದಿಗಳ ಹುಟ್ಟಡಗಿಸ ಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತಿ ದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Sri Raghav

Admin