ನಗದು ರೂಪದ ವೇತನ ಪಾವತಿಗೆ ಬ್ರೇಕ್ ಹಾಕಿದ ಕೇಂದ್ರ ಸರ್ಕಾರ

Spread the love

Salarry

ನವದೆಹಲಿ,ಡಿ.21-ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರು ಹಾಗೂ ಖಾಸಗಿ ವಲಯದ ಉದ್ಯೋಗಿಗಳಿಗೆ ನಗದು ರಹಿತ ವೇತನ ಪಾವತಿಗೆ ಶೀಘ್ರ ಸುಗ್ರೀವಾಜ್ಞೆ ಹೊರಡಿಸಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಳ್ಳುವ ಮೂಲಕ ಆನ್‍ಲೈನ್ ಪೇಮೆಂಟ್‍ಗೆ ಹಾದಿ ಸುಗಮಗೊಳಿಸಿದೆ. ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರಿ ಮತ್ತು ಖಾಸಗಿ ವಲಯದ ನೌಕರರಿಗೆ ಆನ್‍ಲೈನ್ ಮತ್ತು ಚೆಕ್ ಮೂಲಕ ಸಂಬಳ ನೀಡಲು ಸುಗ್ರೀವಾಜ್ಞೆ ಹೊರಡಿಸಲು ತೀರ್ಮಾನಿಸಲಾಯಿತು.  ಸುಗ್ರೀವಾಜ್ಞೆ ನಂತರ ಚೆಕ್ ಮತ್ತು ಆನ್‍ಲೈನ್ ಮೂಲಕವೇ ವೇತನ ಪಾವತಿ ಮಾಡುವುದು ಕಡ್ಡಾಯವಾಗಿದೆ.

ವೇತನಗಳ ಪಾವತಿಗಳ ಕಾಯ್ದೆ 1936ಗೆ ತಿದ್ದುಪಡಿ ಮಾಡಲು ಅನುಕೂಲವಾಗುವಂತೆ ಸುಗ್ರೀವಾಜ್ಞೆ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಇದೇ ವೇಳೆ ಸಂದರ್ಭಕ್ಕನುಗುಣವಾಗಿ ನಗದು ಮೂಲಕವು ವೇತನ ಪಾವತಿಸುವ ಆಯ್ಕೆಯನ್ನು ಉದ್ಯೋಗದಾತರಿಗೆ ನೀಡಲಾಗಿದೆ.  ಪ್ರಧಾನಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕೆಲವು ಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.  ಸೂಕ್ಷ್ಮ , ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ ಅಭಿವೃದ್ದಿ ಆಯುಕ್ತರ ಕಚೇರಿಯಲ್ಲಿ ಭಾರತೀಯ ಉದ್ಯಮ ಅಭಿವೃದ್ದಿ ಸೇವೆಗಳ(ಐಇಡಿಎಸ್) ರಚನೆಗೆ ಸಹ ಸಂಪುಟ ಒಪ್ಪಿಗೆ ನೀಡಿದೆ.  ಈ ಹಿಂದೆ ಇದ್ದ ವಿವಿಧ ಕಾನೂನುಗಳನ್ನು ಏಕೀಕರಣಗೊಳಿಸಿ 11 ವ್ಯಾಪಾರ ವಲಯಗಳನ್ನು ವಿಲೀನಗೊಳಿಸುವ ಮೂಲಕ ಐಇಡಿಎಸ್ ರಚನೆಗೆ ನಿರ್ಧಾರ ಕೈಗೊಳ್ಳಲಾಗಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin