ನಗರದ ಹೊರವಲಯದಲ್ಲಿರುವ ಕ್ಲಬ್ವೊಂದರ ಮೇಲೆ ಸಿಸಿಬಿ ಪೊಲೀಸರು ದಾಳಿ
ಮೈಸೂರು,ಸೆ.21- ನಗರದ ಹೊರವಲಯದಲ್ಲಿರುವ ಕ್ಲಬ್ವೊಂದರ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ 20 ಮಂದಿ ಗ್ರಾಮ ಪಂಚಾಯ್ತಿ ಹಾಗೂ ಜಿಲ್ಲಾ ಪಂಚಾಯ್ತಿ ಸದಸ್ಯರನ್ನು ಬಂಧಿಸಿದ್ದಾರೆ. ರಂಜನರಾಜ ಕ್ಲಬ್ನಲ್ಲಿ ಜನಪ್ರತಿನಿಧಿಗಳು ಜೂಜಾಡುತ್ತಿದ್ದಾರೆಂಬ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ರಾತ್ರಿ ದಾಳಿ ಮಾಡಿದರು. ಪಣಕ್ಕಿಟ್ಟಿದ್ದ 50 ಸಾವಿರ ಹಣ, 20ಕ್ಕೂ ಹೆಚ್ಚು ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗಿದ್ದು , ಈ ಬಗ್ಗೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.