ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ

chintamani--ayke

ಚಿಂತಾಮಣಿ,ಸೆ.19- ಇಲ್ಲಿನ ನಗರಸಭೆಯ ಎರಡನೇ ಅವಧಿಗೆ ಅಧ್ಯಕ್ಷರಾಗಿ ಜೆಡಿಎಸ್ ಪಕ್ಷದ ಸುಜಾತ್ ಶಿವಣ್ಣ ಮತ್ತು ಉಪಾಧ್ಯಕ್ಷರಾಗಿ ಸುಜಾತ ಶಿವಪ್ಪ ಅವಿರೋಧ ಆಯ್ಕೆಯಾದರು. ಇಲ್ಲಿನ ನಗರಸಭೆಯ ಅಧ್ಯಕ್ಷರಗಾದಿಗೆ ಸರಕಾರ ಎರಡನೇ ಅವಧಿಯ ಮೀಸಲಾತಿಯನ್ನು ಪ್ರಕಟಣೆ ಮಾಡಿದ್ದು ಅಧ್ಯಕ್ಷ ಸ್ಥಾನವನ್ನು ಸಾಮಾನ್ಯ (ಮಹಿಳೆ) ಮತ್ತು ಉಪಾಧ್ಯಕ್ಷ ಸ್ಥಾನವನ್ನು ಪರಿಶಿಷ್ಠವರ್ಗ (ಮಹಿಳೆ) ಕ್ಕೆ ಮೀಸಲಿರಿಸಿತ್ತು. ಈ ಎರಡು ಸ್ಥಾನಕ್ಕೆ ಏಕಮೇವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯಾದ ಚಿಕ್ಕಬಳ್ಳಾಪುರ ಉಪವಿಭಾಗಾಧಿಕಾರಿ ಅಮರೇಶ್ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.
ಪಕ್ಷಗಳ ಬಲಾಬಲ:
ಇಲ್ಲಿನನಗರಸಭೈಯಲ್ಲಿ ಹಾಲಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿಯವರ ಬೆಂಬಲಿತ ಜೆಡಿಎಸ್ ಸದಸ್ಯರು 16 ಮಂದಿ ಇದ್ದು ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ ಬಣದ ಪಕ್ಷೇತರರ 13 ಮಂದಿ, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ತಲಾ ಒಬ್ಬೊಬ್ಬ ನಗರಸಭಾ ಸದಸ್ಯರು ಇದ್ದಾರೆ.
ಬಿಜೆಪಿಗೆ ಅದೃಷ್ಠ:
ಸರಕಾರ ಉಪಾಧ್ಯಕ್ಷ ಸ್ಥಾನವನ್ನು ಪರಿಶಿಷ್ಠವರ್ಗ (ಮಹಿಳೆ) ಕ್ಕೆ ಮೀಸಲಿರಿಸಿತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮಾತ್ರ ಏಕಮೇವ ಅಭ್ಯರ್ಥಿ ನಗರದ ಬೊಂಬುಬಜಾರ್ 19ನೇ ವಾರ್ಡಿನ ಬಿಜೆಪಿ ಪಕ್ಷದ ಏಕೈಕ ಸದಸ್ಯರಾದ ಸುಜಾತ ಶಿವಪ್ಪರವರು ಮಾತ್ರ ಇದ್ದು ಅವರಿಗೆ ಮೀಸಲಾತಿಯ ಲಾಭ ದೊರಕಿತು ಶಾಸಕ ಕೃಷ್ಣಾರೆಡ್ಡಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಶುಭಾಶಯ ತಿಳಿಸಿ ಪಕ್ಷಾತೀತವಾಗಿ ನಗರದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ನಗರದ ಅಭಿವೃದ್ದಿಗೆ ಶ್ರಮಿಸುವುವಂತೆ ಹೇಳಿದರು. ನಗರ ಎದುರಿಸುತ್ತಿರುವ ಸ್ವಚ್ಚತೆ ಮತ್ತು ನೀರು ಸರಬರಾಜು ಸಮಸ್ಯೆಗೆ ಹೆಚ್ಚು ಆಧ್ಯತೆ ನೀಡುವುಂತೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಎರಡು ಪಕ್ಷದ ಹಲವಾರು ಮುಖಂಡರು ನಗರಸಭಾ ಸದಸ್ಯರು ಮತ್ತಿತರರು ಹಾಜರಿದ್ದರು.

 

► Follow us on –  Facebook / Twitter  / Google+

 

Sri Raghav

Admin