ನಗರಸಭೆ ಸಿಬ್ಬಂದಿಯಿಂದಲೇ ನೀರು ಪೋಲು

chintamani-6

ಚಿಂತಾಮಣಿ, ಸೆ.22- ಮಳೆ ಇಲ್ಲದೆ ದಿನೇ ದಿನೇ ಅಂತರಜಲ ಕುಸಿಯುತ್ತಿರುವ ಸಂರ್ಧಭದಲ್ಲಿ ನಗರಸಭೆಯ ನೀರು ಸರಬರಾಜು ಸಿಬ್ಬಂದಿ ನೀರು ಪೋಲು   ಮಾಡುತ್ತಿದ್ದರೂ ಅವರತ್ತ ಗಮನ ಹರಿಸುವುವರೇ ಇಲ್ಲವೆಂದು ಡಾ ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮಾಜಿ ಸದಸ್ಯ ನರಸಿಂಹಪ್ಪ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರೀತಿ ಪೋಲು ಮಾಡುತ್ತಿರುವ ಸಂಬಂಧಪಟ್ಟ ಜಲಗಾರರ ವಿರುದ್ದ ಕ್ರಮ ಕೈಗೊಳ್ಳುವಲ್ಲಿ ಅಧಿಕಾರಿಗಳು ವಿಫಲರಾದ ಹಿನ್ನೆಲೆಯಲ್ಲಿ ಕುಡಿಯುವ ನೀರುಪೋಲಾಗುತ್ತಿರುವುದು ಪುನರಾವರ್ತನೆಯಾಗಿದೆ ಎಂದು ಅರೋಪಿಸಿದರು.

ಸಿಗುವ ಕೊಳವೆ ಬಾವಿಗಳಲ್ಲಿ ಅಲ್ಪ ಸ್ವಲ್ಪ ನೀರನ್ನು ನಗರಸಭೆಯ ಮೇಲಂತಸ್ತಿನ ಟ್ಯಾಂಕ್ ನಲ್ಲಿ ಶೇಖರಣೆ ಮಾಡಿ ನಗರದ ಜನತೆಗೆ ಸರಬರಾಜು ಮಾಡುವ ಸಂದರ್ಭದಲ್ಲಿ ಆನೀರನ್ನು ಪೋಲು ಮಾಡುತ್ತಿರುವುದು ಎಷ್ಟರ ಮಟ್ಟ ಸರಿ ಎಂದು ನರಸಿಂಜಹಪ್ಪ ಪ್ರಶ್ನಿಸುತ್ತಾರೆ. ಕೊಡಲೆ ಸಂಬಂಧಪಟ್ಟ ನಗರಸಭೆಯ ಅಧಿಕಾರಿಗಳು ಮತ್ತು ನೀರಿನ ಉಸ್ತುವಾರಿ ವಹಿಸಿರುವ ಅಧಿಕಾರಿಗಳು ನೀರು ಪೋಲು  ಮಾಡುವ ಜಲಗಾರರ ವಿರುದ್ದ ಇನ್ನಾ ದರೂ ಕ್ರಮ ಕೈಗೊಂಡು ನೀರು ಪೋಲು ಆಗುವುದನ್ನು ತಡೆಯುವಂತೆ ಅವರು ಅಗ್ರಹಿಸಿದ್ದಾರೆ.

 

► Follow us on –  Facebook / Twitter  / Google+

Sri Raghav

Admin