ನದಿ ನೀರಿನ ಮಧ್ಯೆ ಅಪಾಯಕ್ಕೆ ಸಿಲುಕಿದ್ದ ಪ್ರವಾಸಿಗರ ರಕ್ಷಿಸಿದ ಸ್ಥಳೀಯರು
ಕೊಳ್ಳೆಗಾಲ, ಜು.26 – ಕಾವೇರಿ ನದಿಯ ನೀರಿನ ಮಧ್ಯೆ ಸಿಲುಕಿದ್ದ 10 ಮಂದಿಯನ್ನು ಸ್ಥಳೀಯರು ರಕ್ಷಣೆ ಮಾಡಿರುವ ಘಟನೆ ತಾಲ್ಲೂಕಿನ ಸತ್ತಗಾಲದಲ್ಲಿ ನಡೆದಿದೆ. ಬೆಂಗಳೂರು ಮೂಲದ ಪ್ರವಾಸಿಗರು ಸತ್ತಗಾಲ ಸಮೀಪದ ಕಾವೇರಿ ನದಿ ನೀರಿನಲ್ಲಿ ಜಲಕ್ರೀಡೆ ಆಡುತ್ತಿದ್ದರು. ಈ ವೇಳೆ ಕೆಆರ್ಎಸ್ ಅಣೆಕಟ್ಟೆಯಿಂದ ನದಿಗೆ ಏಕಾಏಕಿ ನೀರು ಹರಿ ಬಿಟ್ಟಿದ್ದಾರೆ. ಇದರಿಂದ ನೀರಿನ ಮಟ್ಟ ದಿಢೀರ್ ಏರಿಕೆಯಾಗಿದ್ದರಿಂದ ಪ್ರವಾಸಿಗರು ಭಯಗೊಂಡು ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಸಮೀಪದಲ್ಲಿಯೇ ಇದ್ದ ಸ್ಥಳಿಯರು ಕೂಡಲೇ ಸ್ಥಳಕ್ಕೆ ಧಾವಿಸಿ ಅಪಾಯಕ್ಕೆ ಸಿಲುಕಿದ್ದ 10 ಮಂದಿ ಪ್ರವಾಸಿಕರನ್ನು ಏಣಿಯ ಮೂಲಕ ರಕ್ಷಣೆ ಮಾಡಿ ಧೈರ್ಯ ಮೆರೆದಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >