‘ನನಗೆ ಮಾರ್ಯಾದೆ ನೀಡಿದರೆ ನಾನೂ ಮರ್ಯಾದೆ ಕೊಡ್ತಿನಿ’ : ಕಿಚ್ಚ

Spread the love

sUDEEP--01

ಹುಬ್ಬಳ್ಳಿ. ಮಾ.07 : ಕಳೆದ ಮೂರು ದಿನಗಳಿದ ಸ್ಯಾಂಡಲ್ವುಡ್ ನ ಸ್ಟಾರ್ ನಟರ ನಡುವೆ ನಡೆಯುತ್ತಿರುವ ಸ್ಟಾರ್ ವಾರ್ ನಲ್ಲಿ ಇಂದು ಮತ್ತೊಂದು ಬೆಳವಣಿಗೆ ನಡೆದಿದ್ದು ಇದೆ ಮೊದಲ ಬಾರಿಗೆ ದರ್ಶನ ಹೇಳಿಕೆ ಕುರಿತು ನಟ ಸುದೀಪ್ ಮೌನ ಮುರಿದ್ದಿದ್ದು, ‘ನನಗೆ ಮಾರ್ಯಾದೆ ನೀಡಿದರೆ ನಾನೂ ಮರ್ಯಾದೆ ಕೊಡ್ತೇನೆ’ ಎಂದು ಸೂಕ್ಶ್ಮವಾಗಿ ಪ್ರತಿಕ್ರಿಯಿಸಿದ್ದಾರೆ.  ಈ ವಿಷಯ ಕುರಿತು ಹೆಚ್ಚು ಮಾತನಾಡಲಿಚ್ಚಿಸಿದ ಸುದೀಪ್, ಟ್ವಿಟ್ಟರ್ ನಲ್ಲಿ ಈವರೆಗೂ ಯಾವುದೇ ರೀತಿಯ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ. ಅಭಿಮಾನಿಗಳ ಜೊತೆ ಟ್ವಿಟರ್ ನಲ್ಲಿ ಸದಾ ಟಚ್ ನಲ್ಲಿರುವ ಕಿಚ್ಚ ದರ್ಶನ ವಿಷಯ ಕುರಿತು ಯಾವುದೇ ಟ್ವೀಟ್ ಮಾಡದಿರುವುದು, ಅವರು ಈ ವಿವಾದದ ಕುರಿತು ಪ್ರತಿಕ್ರಿಯಿದಿರಲು ನಿರ್ಧರಿಸಿದಂತೆ ಕಾಣುತ್ತದೆ .

3 ದಿನಗಳ ಹಿಂದೆ ನಾವಿಬ್ಬರು ಇನ್ನು ಮುಂದೆ ಸ್ನೇಹಿತರಲ್ಲ, ಒಂದೇ ಚಿತ್ರರಂಗದಲ್ಲಿ ಕೆಲಸಮಾಡುವ ಇಬ್ಬರು ನಟರು ಅಷ್ಟೇ . ಎಂದು ದರ್ಶನ್ ಸುದೀಪ್ ವಿರುದ್ಧ ಟ್ವೀಟ್ ಮಾಡಿದ್ದರು. ಆ ಬಳಿಕ ಮಾಧ್ಯಮಗಳಲ್ಲಿ , ಸಾಮಾಜಿಕ ತಾಣಗಳಲ್ಲಿ ಭಾರೀ ಚರ್ಚೆಯಾಗಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin