ನಬಾರ್ಡ್ ಮೆಚ್ಚುಗೆಗೆ ಡಿಸಿಸಿ ಬ್ಯಾಂಕ್

Spread the love

kolara

ಕೋಲಾರ,ಸೆ.19- ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೋಲಾರ, ಚಿಕ್ಕಬಳ್ಳಾರಪುರ ಜಿಲ್ಲಾ ಸಹಕಾರ ಕೇಂದ್ರದ ಬ್ಯಾಂಕ್(ಡಿಸಿಸಿ ಬ್ಯಾಂಕ್) ಆರ್‍ಬಿಐ ಮತ್ತು ನಬಾರ್ಡ್ ಮೆಚ್ಚುಗೆ ಪಡೆದು ಟೀಕೆಗಾರರ ಬಾಯಿ ಮುಚ್ಚುವಂತೆ ಕಮಿಟಿ ಮತ್ತು ಸಿಬ್ಬಂದಿಗಳು ಶ್ರಮಿಸಿ ಬ್ಯಾಂಕ್‍ನ್ನು ಎ ದರ್ಜೆ ಬ್ಯಾಂಕನ್ನಾಗಿ ರೂಪುಗೊಳಿಸಲಾಗಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೂತನ ಮಂಡಳಿಯು 2014 ಮಾರ್ಚ್ ತಿಂಗಳಲ್ಲಿ -ಅಧಿಕಾರ ವಹಿಸಿಕೊಂಡು ಜಾಗತಿಕ ಯುಗದಲ್ಲಿ ನಬಾರ್ಡ್ ಮಾರ್ಗದರ್ಶನದಲ್ಲಿ ತನ್ನೆಲ್ಲ 13 ಶಾಖೆಗಳನ್ನು ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಏರ್ಪಡಿಸಿ ರಾಷ್ಟ್ರೀಕೃತ ವಾಣಿಜ್ಯ ಹಾಗೂ ಗ್ರಾಮೀಣ ಬ್ಯಾಂಕ್‍ಗಳಿಗೆ ಸ್ಪರ್ಧೆಯಾತ್ಮಕ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.
ಆಡಳಿತ ಮಂಡಳಿ-ಅಧಿಕಾರ ವಹಿಸಿಕೊಂಡಾಗ ಆರ್ಥಿಕ ಸೂಚ್ಯಂಕದಲ್ಲಿ ಪೂರ್ಣ ನಷ್ಟದಲ್ಲಿತ್ತು. ಇದೀಗ ಅಭಿವೃದ್ದಿ ಆರ್ಥಿಕ ಸ್ಥಿರತೆ ಕಾಯ್ದುಕೊಂಡಿರುವ ಬ್ಯಾಂಕ್ ಬಡವರಿಗೆ ವರದಾನವಾಗಿ, ವ್ಯಾಪಾರಿಗಳಿಗೆ , ರೈತ ಮಹಿಳೆಯರಿಗೆ, ಮಹಿಳಾ ಸಂಘಸಂಸ್ಥೆಗಳು ಸಾಲ ವಿತರಿಸಿ ಮೀಟರ್ ಬಡ್ಡಿದಾರರಿಗೆ ಕಡಿವಾಣ ಹಾಕಲಾಗಿದೆ ಎಂದರು. ನಬಾರ್ಡ್‍ನ ಅಧಿಕಾರಿಗಳು ನಾಲ್ಕು ಬಾರಿ ಲೆಕ್ಕ ಪರಿಶೋಧನೆ ನಡೆಸಿದ್ದು , ಬ್ಯಾಂಕ್ ಸದೃಢವಾಗಿದೆ ಎಂದು ಹೇಳಿದರು. ನಬಾರ್ಡ್ ಪ್ರಕಾರ ಕೋಲಾರ ಡಿಸಿಸಿ ಬ್ಯಾಂಕ್ ಶೂನ್ಯ ಅಂಕದಲ್ಲಿದ್ದು, ಈಗ 65 ಅಂಕಗಳಿಸಿದ್ದು , ಮುಂದಿನ ವರ್ಷ 100 ಅಂಕ ಗಳಿಸುವುದು. ಈ ಅಭಿವೃದ್ದಿಗೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಕುಮಾರ್ ಹಾಗೂ ಸಚಿವರು, ಬ್ಯಾಂಕ್ ಸಿಬ್ಬಂದಿಗಳು ಬ್ಯಾಂಕ್ ಅಭಿವೃದ್ದಿಗಾಗಿ ಶ್ರಮಿಸುತ್ತಿದ್ದು, ಎಲ್ಲರಿಗೂ ಕೃತಜ್ಞತೆ ಹೇಳುವುದಾಗಿ ತಿಳಿಸಿದರು.

ಡಿಸಿಸಿ ಬ್ಯಾಂಕ್ ಅಭಿವೃದ್ದಿ ಹೊಂದುತ್ತಿದ್ದು ಸಾಮಾಜಿಕ ಕಳಕಳಿಯಿಂದ ಪ್ರಥಮ ಬಾರಿಗೆ ಸುಸಜ್ಜಿತ ಸಹಕಾರಿ ಆಸ್ಪತ್ರೆ ತೆರೆದು ಬಡವರಿಗೆ ವೈದ್ಯಕೀಯ ಸೇವೆ ನೀಡಲು ಮುಂದಾಗಿದ್ದೇವೆ. ಗ್ರಾಹಕರಿಗೆ ಅನುಷ್ಠಾನಕ್ಕಾಗಿ ಎಟಿಎಂ ಸೇವೆ ಆರಂಭಿಸಲಾಗುವುದು ಎಂದು ತಿಳಿಸಿದರು. ಬ್ಯಾಂಕ್ ನಿರ್ದೇಶಕರಾದ ಸೋಮಣ್ಣ , ದಯಾನಂದ, ಹನುಮೇಗೌಡ, ವ್ಯವಸ್ಥಪಕ ವೆಂಕಟೇಶಪ್ಪ ಮತ್ತಿತರರು ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

 

Facebook Comments

Sri Raghav

Admin