‘ನಮ್ಮ ತಂಟೆಗೆ ಬಂದರೆ ಅಣ್ವಸ್ತ್ರ ಪ್ರಯೋಗ ಮಾಡುತ್ತೇವೆ’ : ಪಾಕ್ ರಕ್ಷಣಾ ಸಚಿವ ಎಚ್ಚರಿಕೆ

Spread the love

Minisrter

ಇಸ್ಲಾಮಾಬಾದ್, ಸೆ.20-ಪಾಕಿಸ್ತಾನದ ಮೇಲೆ ಆಕ್ರಮಣ ಮಾಡಿದಲ್ಲಿ ಭಾರತದ ವಿರುದ್ಧ ಅಣ್ವಸ್ತ್ರಗಳನ್ನು ಬಳಸುವುದಾಗಿ ಪಾಕ್ ರಕ್ಷಣಾ ಸಚಿವ ಖ್ವಾಜಾ ಎಂ. ಆಸಿಫ್ ಹೇಳಿದ್ದಾರೆ. ಭಾರತದ ಯಾವುದೇ ದಾಳಿಯನ್ನು ಎದುರಿಸಲು ಪಾಕ್ ಸನ್ನದ್ಧವಾಗಿದೆ. ಒಂದು ವೇಳೆ ಅದು ನಮ್ಮ ಮೇಲೆ ಆಕ್ರಮಣ ಮಾಡಿದರೆ, ನಾವು ಅಣ್ವಸ್ತ್ರಗಳನ್ನು ಪ್ರಯೋಗಿಸುತ್ತೇವೆ ಎಂದು ಸಂದರ್ಶನವೊಂದರಲ್ಲಿ ಎಚ್ಚರಿಕೆ ನೀಡಿದ್ದಾರೆ. ನ್ಯೂಯಾರ್ಕ್‍ನಲ್ಲಿ ವಿಶ್ವಸಂಸ್ಥೆಯ 71ನೇ ಸಾಮಾನ್ಯ ಮಹಾಧಿವೇಶನ ನಡೆಯುತ್ತಿರುವ ಸಂದರ್ಭದಲ್ಲೇ ಪಾಕ್ ಸಚಿವರ ಈ ಹೇಳಿಕೆ ವಿವಾದಗ್ರಸ್ತವಾಗಿದೆ.  ಭಾರತದಿಂದ ಎದುರಾಗಬಹುದಾದ ಪ್ರತ್ಯಕ್ಷ ಮತ್ತು ಪರೋಕ್ಷ ಯುದ್ಧವನ್ನು ಎದುರಿಸಲು ಸಿದ್ಧವಿರುವುದಾಗಿ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ರಹೀಲ್ ಷರೀಫ್ ಕೂಡ ಹೇಳಿದ್ದಾರೆ.

ನವಾಜ್ ಉದ್ಧಟತನ :
ಕಾಶ್ಮೀರದ ಉರಿ ಸೇನಾ ನೆಲೆ ಮೇಲೆ ನಡೆದ ಭಾರತೀಯ ಯೋಧರ ಹತ್ಯಾಕಾಂಡ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸದೇ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಉದ್ದಟತನ ಪ್ರದರ್ಶಿಸಿದ್ದಾರೆ.  ವಿಶ್ವಸಂಸ್ಥೆಯ 71ನೇ ಸಾಮಾನ್ಯ ಮಹಾಧಿವೇಶನದಲ್ಲಿ ಭಾಗವಹಿಸಲು ನ್ಯೂಯಾರ್ಕ್‍ನಲ್ಲಿರುವ ನವಾಜ್‍ರನ್ನು ಮಾಧ್ಯಮ ಪ್ರತಿನಿಧಿಗಳು ಉರಿ ನರಮೇಧದ ಬಗ್ಗೆ ಪ್ರಶ್ನಿಸಿದಾಗ ಅವರು ಉರಿದು ಹೋದರು. ಈ ವಿಷಯದ ಬಗ್ಗೆ ಮಾತನಾಡಲು ನಾನು ಸಿದ್ಧವಿಲ್ಲ ಎಂದು ಸಿಡುಕಿನಿಂದ ಹೇಳಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin