‘ನಮ್ಮ ಮನೆಗೆ ಬನ್ನಿ, ನಿಮಗೆ ಒಳ್ಳೆ ಟೀ ಕೊಡುತ್ತೇನೆ..’ : ಚಿಕಿತ್ಸೆ ನೀಡುತ್ತಿದ್ದ ಸಿಬ್ಬಂದಿಗೆ ಆತ್ಮೀಯ ಆಹ್ವಾನ ನೀಡಿದ್ದ ಅಮ್ಮ

Jayalalithaa

 ಚೆನ್ನೈ, ಡಿ.8-ನಮ್ಮ ಮನೆಗೆ ಬನ್ನಿ.. ನಾನು ನಿಮಗೆ ಒಳ್ಳೆಯ ಟೀ ಕೊಡುತ್ತೇನೆ.. ಇದು ತಮಿಳರ ಆರಾಧ್ಯದೇವತೆ ಪುರುಚ್ಚಿ ತಲೈವಿ ಜಯಲಲಿತಾ ತಾವು ಚಿಕಿತ್ಸೆ ಪಡೆಯುತ್ತಿದ್ದ ವೈದ್ಯಕೀಯ ಸಿಬ್ಬಂದಿಗೆ ನೀಡಿದ್ದ ಆತ್ಮೀಯ ಆಹ್ವಾನ.  ಸೆ.22ರಂದು ಅನಾರೋಗ್ಯಕ್ಕೆ ಒಳಗಾಗಿ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಗೆ ಒಳಗಾಗಿದ್ದರು. ಅಲ್ಲಿ ಚೇತರಿಸಿಕೊಳ್ಳುತ್ತಿದ್ದ ವೇಳೆ ತಮ್ಮನ್ನು ತುಂಬಾ ಮುತುವರ್ಜಿಯಿಂದ ಆರೈಕೆ ಮಾಡುತ್ತಿದ್ದ ಮೂವರು ಸ್ಥೂಲಕಾಯದ ನರ್ಸ್‍ಗಳಿಗೆ ಜಯಾ ಪ್ರೀತಿಯಿಂದ ಇಟ್ಟ ಹೆಸರು ಕಿಂಗ್‍ಕಾಂಗ್ !

ಸುದೀರ್ಘ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಡಿಎಂಕೆ ಅಧಿನಾಯಕಿ ಜಯಾ, ಸಿ.ವಿ.ಶೀಲಾ, ಎಂ.ವಿ.ರೇಣುಕಾ ಮತ್ತು ಚಾಮುಂಡೇಶ್ವರಿ ಎಂಬ ಸ್ಟಾಫ್ ನರ್ಸ್‍ಗಳೊಂದಿಗೆ ತುಂಬಾ ಆತ್ಮೀಯವಾಗಿದ್ದರು, ಈ ಮೂವರು ಒಂದೊಂದು ಪಾಳಿಯಲ್ಲಿ ಜಯಾರನ್ನು ಕಕ್ಕುಲಾತಿಯಿಂದ ಆರೈಕೆ ಮಾಡುತ್ತಿದ್ದರು.  ಹೇಳಮ್ಮ.. ನಾನೇನು ಮಾಡಬೇಕು ಹೇಳು.. ನೀನು ಹೇಳಿದಂತೆ ನಾನು ಕೇಳುತ್ತೇನೆ ಎಂದು ನರ್ಸ್‍ಗಳಿಗೆ ತಮಿಳುನಾಡು ಮುಖ್ಯಮಂತ್ರಿ ನನಗೆ ಹೇಳುತ್ತಿದ್ದರು ಎಂದು ನರ್ಸ್ ಶೀಲಾ ನೆನಪಿಸಿಕೊಳ್ಳುತ್ತಾರೆ.

ಒಮ್ಮೆ ಸಿಬ್ಬಂದಿ ಜಯಾರಿಗೆ ಆರೈಕೆ ಮಾಡುತ್ತಿದ್ದಾಗ, ನಾನು ಬೇಗ ಚೇತರಿಸಿಕೊಳ್ಳುತ್ತೇನೆ. ನಮ್ಮ ಮನೆಗೆ ಹೋಗೋಣ. ನಿಮಗೆಲ್ಲಾ ಒಳ್ಳೆಯ ಚಹಾ ಮಾಡಿಕೊಡುತ್ತೇನೆ ಎಂದು ಹೇಳಿದ್ದರು. ಆದರೆ ಅವರು ಬಾರದ ಲೋಕಕ್ಕೆ ಹೊರಟು ಹೋಗಿದ್ದಾರೆ ಎಂದು ಐಸಿಯು ಘಟಕದ ಸಿಬ್ಬಂದಿ ಹೇಳುವಾಗ ಅವರ ಕಣ್ಣಾಲಿಗಳು ತುಂಬಿ ಬಂದಿದ್ದವು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin