ನಮ್ಮ ಮೆಟ್ರೋಗೆ ಶಂಕರ್‍ನಾಗ್ ಹೆಸರಿಡಿ

Spread the love

Namm-Metro

ಬೆಂಗಳೂರು, ನ.9-ನಮ್ಮ ಮೆಟ್ರೋಗೆ ಮೆಟ್ರೋ ಶಂಕರ್ ಎಂದು ಹೆರಿಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ನೇತೃತ್ವದಲ್ಲಿ ನಗರದ ಫ್ರೀಡಂ ಪಾರ್ಕ್‍ನಲ್ಲಿ ಬೃಹತ್ ರ್ಯಾಲಿ ನಡೆಸಿ ಒತ್ತಾಯಿಸಲಾಯಿತು. ಕರವೇ ರಾಜ್ಯಾಧ್ಯಕ್ಷ ಪ್ರವೀಣ್‍ಶೆಟ್ಟಿ, ನಗರ ಘಟಕದ ಅಧ್ಯಕ್ಷ ಶಿವಾನಂದ್ ಹಾಗೂ ಆಟೋ ಘಟಕದ ಪದಾಧಿಕಾರಿಗಳೊಂದಿಗೆ ನಗರದ ಸ್ವಾತಂತ್ರ್ಯ ಉದ್ಯಾನವನದಿಂದ ಆನಂದ್ ವೃತ್ತದವರೆಗೆ ಆಟೋ ರ್ಯಾಲಿ ನಡೆಸಿ ಮೆಟ್ರೋ ಯೋಜನೆಗೆ ಶಂಕರ್‍ನಾಗ್ ಹೆಸರಿಡುವಂತೆ ಒತ್ತಾಯಿಸಲಾಯಿತು. ಆಟೋ ಚಾಲಕರ ಮನ, ಮನೆಗಳಲ್ಲಿ ಶಂಕರ್‍ನಾಗ್ ಮನೆ ಮಾಡಿದ್ದಾರೆ. ಮೆಟ್ರೋ ಯೋಜನೆ ಶಂಕರ್‍ನಾಗ್ ಅವರ ಕನಸಾಗಿತ್ತು. ಕಳೆದ 3 ದಶಕಗಳ ಹಿಂದೆಯೇ ಅವರು ಮೆಟ್ರೋ ಯೋಜನೆ ಬಗ್ಗೆ 9 ಲಕ್ಷ ವೆಚ್ಚ ಮಾಡಿ ಬ್ಲೂ ಪ್ರಿಂಟ್ ತಯಾರಿಸಿದ್ದರು.

ಅಲ್ಲದೆ ನಂದಿ ಬೆಟ್ಟಕ್ಕೆ ರೋಪ್‍ವೇ ನಿರ್ಮಾಣ ಮಾಡಬೇಕೆಂಬ ಯೋಜನೆಯೂ ಕೂಡ ಇವರದೇ ಆಗಿತ್ತು. ಹೀಗಾಗಿ ಇವರ ಹೆಸರನ್ನು ಅಜರಾಮರಗೊಳಿಸಬೇಕಾಗಿದೆ.  ನಗರದ ಹಲವೆಡೆ ಮೆಟ್ರೋ ರೈಲುಗಳ ಸಂಚಾರ ಪ್ರಾರಂಭವಾಗಿದೆ. ಈಗ ನಮ್ಮ ಮೆಟ್ರೋಗೆ ಶಂಕರ್ ಮೆಟ್ರೋ ಎಂದು ನಾಮಕರಣ ಮಾಡುವ ಮೂಲಕ ಅವರ ಹೆಸರಿಗೆ ಗೌರವ ತರಬೇಕೆಂದು ಪ್ರವೀಣ್ ಶೆಟ್ಟಿ ಒತ್ತಾಯಿಸಿದರು. ಚಲನಚಿತ್ರ ನಟರಾಗಿದ್ದ ಶಂಕರ್ ನಾಗ್ ಅವರು ಸಾಕಷ್ಟು ಸಾಮಾಜಿಕ ಕಳಕಳಿ ಹೊಂದಿದ್ದರು. ದೂರದೃಷ್ಟಿಯ ಯೋಜನೆಗಳನ್ನು ರೂಪಿಸಿದ್ದರು. ಆ ಯೋಜನೆಗಳಲ್ಲಿ ಮೆಟ್ರೋ ಕೂಡ ಒಂದಾಗಿತ್ತು ಎಂಬುದು ಗಣನೀಯ ಅಂಶ. ಹಾಗಾಗಿ ಅವರ ಹೆಸರನ್ನು ಇಡಬೇಕೆಂದು ಆಗ್ರಹಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin