ನಮ್ಮ ಮೆಟ್ರೋದಲ್ಲಿ ಉದ್ಯೋಗಾವಕಾಶ, ಇಲ್ಲಿದೆ ನೋಡಿ ಡೀಟೇಲ್ಸ್

Spread the love

metro

ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್ (ಬಿಎಂಆರ್ಸಿಎಲ್) ನಲ್ಲಿ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಮತ್ತು ಅಸಿಸ್ಟೆಂಟ್ ಇಂಜಿನಿಯರ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ  ಸಂಸ್ಥೆಯ ವಿಳಾಸಕ್ಕೆ ಅರ್ಜಿ ಸಲ್ಲಿಸುವಂತೆ ತಿಳಿಸಿದೆ.­­­­
ಒಟ್ಟು ಹುದ್ದೆಗಳ ಸಂಖ್ಯೆ : 60
ಹುದ್ದೆಗಳ ವಿವರ
1). ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ -30
2). ಅಸಿಸ್ಟೆಂಟ್ ಇಂಜಿನಿಯರ್ – 30
ವಿದ್ಯಾರ್ಹತೆ ; ಕ್ರ.ಸಂ 1ರ ಹುದ್ದೆಗೆ ಇಂಜಿನಿಯರಿಂಗ್ ಅಥವಾ ಎಂಟೆಕ್ (ಸಿವಿಲ್) ಪದವಿ ಪಡೆದಿರಬೇಕು. ಕ್ರ.ಸಂ 2ರ ಹುದ್ದೆಗೆ ಇಂಜಿನಿಯರಿಂಗ್ , ಎಂಟೆಕ್ ಪದವಿ ಅಥವಾ ಡಿಪ್ಲೋಮಾ (ಸಿವಿಲ್) ಕೋರ್ಸ್ ಶಿಕ್ಷಣ ಪಡೆದಿರಬೇಕು.
ವಯೋಮಿತಿ ; ಕ್ರ.ಸಂ 1ರ ಹುದ್ದೆಗೆ ಗರಿಷ್ಟ 40 ವರ್ಷ, ಕ್ರ.ಸಂ 2ರ ಹುದ್ದೆಗೆ ಗರಿಷ್ಟ 35 ವರ್ಷ ವಯಸ್ಸು ನಿಗದಿ ಮಾಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15-01-2018
ಅರ್ಜಿ ಸಲ್ಲಿಸುವ ವಿಳಾಸ : ಜನರಲ್ ಮ್ಯಾನೆಜರ್ (ಹೆಚ್ ಆರ್), ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್, ಮೂರನೆ ಮಹಡಿ, ಬಿಎಂಟಿಸಿ ಸಂಕೀರ್ಣ, ಕೆ.ಹೆಚ್ ರಸ್ತೆ, ಶಾಂತಿನಗರ ಬೆಂಗಳೂರು 560027 ಇಲ್ಲಿಗೆ ಸಲ್ಲಿಸುವಂತೆ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ  ವೆಬ್ ಸೈಟ್ ವಿಳಾಸ  http://kannada.bmrc.co.in  ಗೆ ಭೇಟಿ ನೀಡಿ.

ಅಧಿಸೂಚನೆ

36d631_CareerFiles-metro-001 36d631_CareerFiles-metro-002 36d631_CareerFiles-metro-003 36d631_CareerFiles-metro-004

Sri Raghav

Admin