ನವೆಂಬರ್‍ನಿಂದ ಬಿಬಿಎಂಪಿ ಪೌರಕಾರ್ಮಿಕರಿಗೆ ಬಿಸಿಯೂಟ

BBMP-01

ಬೆಂಗಳೂರು, ಅ.14- ನವೆಂಬರ್ ತಿಂಗಳಿನಿಂದ ಪೌರಕಾರ್ಮಿಕರಿಗೆ ಮಧ್ಯಾಹ್ನದ ಬಿಸಿ ಊಟ ನೀಡಲು ತೀರ್ಮಾನಿಸಲಾಗಿದೆ ಎಂದು ಪದ್ಮಾವತಿ ಇಂದಿಲ್ಲಿ ತಿಳಿಸಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಇಂತಹ ಯೋಜನೆಯನ್ನು ಬಿಬಿಎಂಪಿ ಆಯೋಜಿಸಿದೆ. 28 ಸಾವಿರ ಪೌರಕಾರ್ಮಿಕರಿಗೆ ಬಿಸಿಯೂಟ ಲಭ್ಯವಾಗಲಿದೆ ಎಂದರು. ಇಸ್ಕಾನ್ ವತಿಯಿಂದ ಊಟ ಸರಬರಾಜಾಗಲಿದೆ. 4 ದಿನ ಅನ್ನ ಸಾಂಬಾರ್ ಮೂರು ದಿನದಲ್ಲಿ ಒಂದು ದಿನ ಬಿಸಿಬೇಳೆಬಾತ್, ಒಂದು ದಿನ ಪಲಾವ್, ಮಗದೊಂದು ದಿನ ರೈಸ್‍ಬಾತ್ ನೀಡಲಾಗುತ್ತದೆ. ಒಂದು ಊಟಕ್ಕೆ 20ರೂ. ನಿಗದಿ ಮಾಡಲಾಗಿದೆ ಎಂದು ಹೇಳಿದರು.

ಒಟ್ಟಾರೆ ಪೌರಕಾರ್ಮಿಕರಿಗೆ ಪೌಷ್ಠಿಕಾಂಶವುಳ್ಳ ಊಟ ನೀಡುವ ಉದ್ದೇಶದಿಂದ ಈ ಯೋಜನೆ ತರಲಾಗಿದೆ. ಮಸ್ಟರ್ ಬಳಿ ಬೆಳಿಗ್ಗೆ 10 ಗಂಟೆಗೆ ಇಸ್ಕಾನ್ ಊಟ ಸರಬರಾಜು ಮಾಡಲಿದೆ. ತಟ್ಟೆ-ಲೋಟವನ್ನು ಪಾಲಿಕೆ ವತಿಯಿಂದ ನೀಡಲಾಗುತ್ತದೆ ಎಂದು ತಿಳಿಸಿದರು.

► Follow us on –  Facebook / Twitter  / Google+

Sri Raghav

Admin