ನಾಗಲಿಂಗೇಶ್ವರ ಸೊಸೈಟಿಯ 2ನೇ ಶಾಖೆ ಉದ್ಘಾಟನೆ

BELAGAM-00

ಮೂಡಲಗಿ,ಆ.31- ಸಹಕಾರ ಸೊಸೈಟಿಯ ಗ್ರಾಹಕರು ತೆಗೆದುಕೊಂಡ ಸಾಲವನ್ನು ಉದ್ದೇಶಕ್ಕಾಗಿ ಬಳಸಿ ಸಕಾಲಕ್ಕೆ ಮರುಪಾವತಿಸಿದರೆ ಆರ್ಥಿಕ ಸಂಘಗಳು ಅಭಿವೃದ್ಧಿ ಹೊಂದಿ ಪ್ರಗತಿ ಸಾಧಿಸುತ್ತವೆ ಎಂದು ಮೂಡಲಗಿ ಶ್ರೀ ಶಿವಬೋಧರಂಗ ಸಿದ್ಧ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಶ್ರೀಪಾದಬೋಧ ಸ್ವಾಮಿಗಳು ಹೇಳಿದರು. ಸ್ಥಳೀಯ ಶ್ರೀ ನಾಗಲಿಂಗೇಶ್ವರ ಅರ್ಬನ್ ಸೊಸಾಯಿಟಿಯ ರಾಜಪೂರದಲ್ಲಿ ಎರಡನೆಯ ಶಾಖೆಯನ್ನು ಉದ್ಘಾಟಿಸಿ ಮಾತನಾಡಿ ಅವರು, ಶಾಖೆಯ ಮೂಲ ಬೇರು ಪ್ರಧಾನ ಕಾರ್ಯಾಲಯ ಇದ್ದರೂ, ಗಿಡ ಮರಗಳ ಅಂಗಾಂಗಗಳು ಯಾವ ರೀತಿ ತಮ್ಮ ಪಾಲಿನ ಕರ್ತವ್ಯ ಮಾಡುತ್ತಿವೆ ಅದೇ ರೀತಿ ಶಾಖೆಯ ಸಲಹಾ ಮಂಡಳಿ ಸಿಬ್ಬಂದಿ ವರ್ಗ ಮತ್ತು ಸರ್ವ ಸದಸ್ಯರು ಸಹಕಾರದಿಂದ ಕಾರ್ಯನಿರ್ವಹಿಸಿದರೆ ಶಾಖೆಯ ಪ್ರಗತಿಯೊಂದಿಗೆ ಸೊಸಾಯಿಟಿಯ ಅಭಿವೃದ್ಧಿಯು ಆಗುತ್ತದೆ ಎಂದರು.

ಮುಖ್ಯ ಅತಿಥಿ ಉ-ಕ ಹೋರಾಟ ಸಮಿತಿಯ ರಾಜಧ್ಯಕ್ಷ ಭೀಮಪ್ಪ ಗಡಾದ ಮಾತನಾಡಿ, ಈ ಭಾಗವು ಆರ್ಥಿಕ ತರಕಾರಿ ಬೆಳೆದು ಸಾಕಷ್ಟು ಪ್ರಗತಿ ಹೊಂದುತಿದ ನಾಡಿನ ಜನತೆ ಸಂಘದೊಂದಿಗೆ ಒಳ್ಳೆಯ ರೀತಿಯಿಂದ ವ್ಯವಹರಿಸಬೇಕೆಂದರು. ಸರಕಾರದ ಸಾಲ ಯೋಜನೆಗಳಾದ ಹಿಂದುಳಿದ ವರ್ಗಗಳ ಮಹಿಳಾ ಅಭಿವೃದ್ಧಿ ಇನ್ನಿತರ ಇಲಾಖೆಯ ಸಾಲದ ಯೋಜನೆಗಳನ್ನು ಅರ್ಬನ್ ಸೊಸಾಯಿಟಿಗಳಿಗೆ ಮಾರ್ಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ಬೆಂಗಳೂರು ಭೂಸ್ವಾದಿನ ಅಧಿಕಾರಿ ಬಾಳಪ್ಪಾ ಹಂದಿಗುಂದ ಮಾತನಾಡಿ, ಜನರಿಂದ ಜನರಿಗಾಗಿ ಹುಟ್ಟಿ ಜನತೆಗೋಸ್ಕರ ಇರುವ ಸೊಸಾಯಿಟಿಗೆ ಈ ಭಾಗದ ಜನತೆ ಸಹಕರಿಸಬೇಕೆಂದು ಪ್ರಭಾ ಶುಗರ್ ಮಾಜಿ ನಿರ್ದೇಶಕ ಬಸವಂತ ಕಮತೆ, ಪಿ.ಎಲ್.ಡಿ. ಬ್ಯಾಂಕ

ಉಪಾಧ್ಯಕ್ಷ ರಾಜು ಬೈರುಗೋಳ ಮಾತನಾಡಿ, ಆರ್ಥಿಕ ಸಂಘಗಳಿಂದ ಗ್ರಾಮದ ಜನತೆ ಉದ್ಧಾರವಾಗುತ್ತದೆ. ದೊಡ್ಡ ದೊಡ್ಡ ಬ್ಯಾಂಕುಗಳು ಸಾಮಾನ್ಯರಿಗೆ ಸಾಲ ಕೊಡಲು ಸಾಕಷ್ಟು ಕಾಗದ ಪತ್ರಗಳನ್ನು ಕೂಡಿಸಲು ಕಾಡಿಸುತ್ತಾರೆ ಆದರೆ ಈ ಸಂಘದಲ್ಲಿ ಗ್ರಾಮದ ಜನರ ಬಗ್ಗೆ ಗೊತ್ತಿದ್ದ ಸಲಹಾ ಮಂಡಳಿ ಇರುವುದರಿಂದ ಸಾಲ ಕೊಡಲು ಯಾವುದೇ ತೊಂದರೆ ಆಗುವುದಿಲ್ಲ ಎಂದರು. ಅಧ್ಯಕ್ಷತೆ ವಹಿಸಿದ ಟಿಎಪಿಸಿಎಮ್‍ಎಸ್ ಉಪಾಧ್ಯಕ್ಷ ವಿಠ್ಠಲ ಪಾಟೀಲರ ಮಾತನಾಡಿ, ಆರ್ಥಿಕ ಸಂಘಗಳು ಸಂಘಟಣೆ ಮಾಡಿಕೊಂಡು ಲಾಭಾಂಶದಲ್ಲಿ 33% ಟ್ಯಾಕ್ಸ್ ಸರಕಾರಕ್ಕೆ ತುಂಬುವುದನ್ನು ತಡೆದು ಇದೇ ಹಣವನ್ನು ಕಡಿಮೆ ಬಡ್ಡಿ ದರದಲ್ಲಿ ಸಾಲ ಮತ್ತು ಶೇರುದಾರರಿಗೆ ಹೆಚ್ಚು ಲಾಭಾಂಶ ಹಂಚಲು ಪ್ರಯತ್ನಿಸಬೇಕೆಂದು ಸಲಹೆ ನೀಡಿದರು.

ವೇದಿಕೆಯಲ್ಲಿ ಬಸವರಾಜ ಪಂಡ್ರೋಳಿ, ಸಿದ್ದವ್ವ ಅಥಣಿ, ಲಕ್ಷ್ಮಣ ಗಣಪ್ಪಗೋಳ, ಬೈರಪ್ಪ ಯಕ್ಕುಂಡಿ, ರಾಮಣ್ಣ ಬಂಡಿ, ಶಿವಲಿಂಗ ಪೂಜೇರಿ, ಹೊನ್ನಜ್ಜ ಕೋಳಿ, ಶಿವಮೂರ್ತಿ ಹುಕ್ಕೇರಿ, ರಾಮಚಂದ್ರ ಪಾಟೀಲ, ರಾಮಕೃಷ್ಣ ಹೊರಟ್ಟಿ, ಶ್ರೀಪತಿ ಗಣೇಶವಾಡಿ, ನಾಗಪ್ಪ ಹೊರಟ್ಟಿ, ರಾಮಪ್ಪ ಮುತ್ನಾಳಿ, ರಾಮಚಂದ್ರ ಗುಂಡಪ್ಪಗೋಳ, ಸಿದ್ದಪ್ಪಾ ತುಕ್ಕಾನಟ್ಟಿ, ಚಿಂತಾಮಣಿ ಮೇಟಿ ಸೊಸಾಯಿಟಿಯ ಪ್ರಧಾನ ಕಛೇರಿ ಮತ್ತು ಶಾಖೆಗಳ ಸದಸ್ಯರು, ಪ್ರಧಾನ ಕಾರ್ಯದರ್ಶಿ ಮಹಾದೇವ ಮಲಗೌಡರ ಮತ್ತಿತರರು ಇದ್ದರು. ಸೊಸಾಯಿಟಿಯ ಅಧ್ಯಕ್ಷ ಎಸ್.ಬಿ. ಹಂದಿಗುಂದ ಸ್ವಾಗತಿಸಿ ದರು, ರಮೇಶ ಗುಂಡಪ್ಪಗೋಳ ನಿರೂಪಿಸಿದರು, ಆಯ್.ಎಮ್. ಕಲ್ಲೂರ ವಂದಿಸಿದರು.

 

► Follow us on –  Facebook / Twitter  / Google+

Sri Raghav

Admin