ನಾನು ಫುಟ್ಬಾಲ್, ಎನ್ಡಿಎ ಮತ್ತು ಯುಪಿಎ ನನ್ನನ್ನು ಒದೆಯುತ್ತಿವೆ : ಮಲ್ಯ
ನವದೆಹಲಿ, ಫೆ.3- ಸಾಲ ಸುಸ್ತಿದಾರರು ದೇಶದಿಂದ ಪಲಾಯನವಾಗುವುದನ್ನು ತಡೆಯಲು ಕೇಂದ್ರ ಸರ್ಕಾರ ಕಠಿಣ ಕಾನೂನು ಜಾರಿಗೊಳಿಸುವುದಕ್ಕೆ ಮುಂದಾಗಿರುವ ಕ್ರಮವನ್ನು ಕಳಂಕಿತ ಉದ್ಯಮಿ ವಿಜಯ್ ಮಲ್ಯ ತಮ್ಮದೇ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ನಾನೊಂದು ರೀತಿಯ ಫುಟ್ಬಾಲ್ ಇದ್ದಂತೆ. ಎರಡು ತಂಡಗಳಾದ ಎನ್ಡಿಎ ಮತ್ತು ಯುಪಿಎ ನನ್ನನ್ನು ಮೈದಾನದ ಸುತ್ತ ಬಲವಾಗಿ ಒದೆಯುತ್ತಿವೆ. ಇದಕ್ಕೆ ಮಾಧ್ಯಮವನ್ನು ಕ್ರೀಡಾಂಗಣವಾಗಿ ಬಳಸಿಕೊಳ್ಳಲಾಗಿದೆ ಎಂದು ಮದ್ಯದ ದೊರೆ ತಮ್ಮನ್ನು ಕಾಲ್ಚೆಂಡಿಗೆ ಹೋಲಿಕೆ ಮಾಡಿಕೊಂಡಿದ್ದಾರೆ.
Media happily being used as the pitch. I am the football. Two fiercely competitive teams NDA versus UPA playing.Unfortunately no Referees.
— Vijay Mallya (@TheVijayMallya) February 3, 2017
ತಮ್ಮ ವಿರುದ್ಧ ಸಿಬಿಐ ತನಿಖೆ ಮುಂದುವರೆದಿರುವ ಹಾಗೂ ತಮ್ಮನ್ನು ಇಂಗ್ಲೆಂಡ್ನಿಂದ ದೇಶಕ್ಕೆ ವಾಪಸ್ಸು ಕರೆತರಲು ನಡೆಯುತ್ತಿರುವ ಪ್ರಯತ್ನಗಳ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ನನ್ನ ವಿರುದ್ಧ ಮಾಧ್ಯಮಗಳನ್ನೂ ಸಹ ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ. ನಾನೊಂದು ಫುಟ್ಬಾಲ್, ಎರಡು ಪ್ರಬಲ ತಂಡಗಳಾದ ಎನ್ಡಿಎ ಮತ್ತು ಯುಪಿಎ ನಡುವೆ ಪಂದ್ಯ ನಡೆಯುತ್ತಿದೆ. ಇದಕ್ಕೆ ಮಾಧ್ಯಮ ಮೈದಾನವಾಗಿದೆ. ದುರದೃಷ್ಟವಶಾತ್ ಈ ಪಂದ್ಯಕ್ಕೆ ರೆಪ್ರೀ ಇಲ್ಲ ಎಂದು ಮಲ್ಯ ಟ್ವೀಟ್ ಮಾಡಿದ್ಧಾರೆ.
< Eesanje News 24/7 ನ್ಯೂಸ್ ಆ್ಯಪ್ >