‘ನಾನು ಮಲೇಷ್ಯಾ ಪ್ರವಾಸೋದ್ಯಮ ರಾಯಭಾರಿ ಅಲ್ಲ’ : ರಜನಿಕಾಂತ್ ಸ್ಪಷ್ಟನೆ

Rajnikanth

ಚೆನ್ನೈ, ಮಾ.31– ನಾನು ಮಲೇಷ್ಯಾ ಪ್ರವಾಸೋದ್ಯಮದ ರಾಯಭಾರಿ ಅಲ್ಲ. ಈ ಕುರಿತು ಹಬ್ಬಿರುವ ಸುದ್ದಿಗಳು ಸುಳ್ಳು ಎಂದು ಸೂಪರ್‍ಸ್ಟಾರ್ ರಜನಿಕಾಂತ್ ಸ್ಪಷ್ಟಪಡಿಸಿದ್ದಾರೆ. ಮಲೇಷ್ಯಾ ಪ್ರಧಾನಿ ನಜೀಬ್ ರಜಾಕ್ ಮತ್ತು ಕುಟುಂಬದ ಸದಸ್ಯರು ಇಂದು ಚೆನ್ನೈನಲ್ಲಿ ರಜನಿಕಾಂತ್ ಅವರನ್ನು ಭೇಟಿ ಮಾಡಿದರು.
ನನ್ನ ಅಭಿನಯದ ಕಬಾಲಿ ಚಿತ್ರದ ಬಹುತೇಕ ಚಿತ್ರೀಕರಣ ಮಲೇಷ್ಯಾದಲ್ಲಿ ನಡೆದಿದ್ದು, ಶೂಟಿಂಗ್‍ಗೆ ಸಹಾಯ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಚೆನ್ನೈಗೆ ಆಗಮಿಸುವಂತೆ ನಾನು ಅವರನ್ನು ಆಮಂತ್ರಿಸಿದ್ದೆ. ಹೀಗಾಗಿ ಅವರು ಬಂದು ನನ್ನನ್ನು ಭೇಟಿ ಮಾಡಿದ್ದರು. ಇದೊಂದು ಸ್ನೇಹಪೂರ್ವಕ ಭೇಟಿ ಅಷ್ಟೇ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ರಜನಿ ಸುದ್ದಿಗಾರರಿಗೆ ಸ್ಪಷ್ಟಪಡಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin