ನಾಪತ್ತೆಯಾಗಿದ್ದ ಮಹಿಳೆ ಶವವಾಗಿ ಪತ್ತೆ : ಕೊಲೆ ಶಂಕೆ

Spread the love

channapatana5

ಚನ್ನಪಟ್ಟಣ, ಸೆ.20- ವಾರದ ಹಿಂದೆ ನಾಪತ್ತೆಯಾಗಿದ್ದ ಮಹಿಳೆ ಮುಳ್ಳಿನ ಪೊದೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಪತಿಯ ಮೇಲೆ ಕೊಲೆ ಶಂಕೆ ವ್ಯಕ್ತವಾಗಿದೆ.ಮೋಳೆದೊಡ್ಡಿ ವೆಂಕಟೇಶ ಎಂಬುವರ ಮಗಳಾದ ನಾಗಮ್ಮ, ಮಳವಳ್ಳಿ ತಾಲ್ಲೂಕಿನ ದಬ್ಬವಾಡಿ ಗ್ರಾಮದ ಆನಂದ್ ಎಂಬಾತನನ್ನು ಐದು ವರ್ಷದ ಹಿಂದೆ ಪ್ರೀತಿಸಿ ಕುಟುಂಬದವರ ವಿರೋಧದ ನಡುವೆಯೂ ಮದುವೆ ಮಾಡಿಕೊಂಡಿದ್ದರು.ಕೆಲವು ವರ್ಷ ಅನ್ಯೋನ್ಯವಾಗಿದ್ದ ಈ ದಂಪತಿಗೆ ಒಂದು ಗಂಡುಮಗುವಿದ್ದು, ಇತ್ತೀಚೆಗೆ ದಂಪತಿ ನಡುವೆ ಸಾಮರಸ್ಯ ಕೊರತೆ ಉಂಟಾಗಿ ವತಿಯಿಂದ ದೂರವಿದ್ದು ಮಗ ನಂದನ್ ಜತೆ ನಾಗಮ್ಮ ವಾಸವಾಗಿದ್ದರು.

ಹೊಂಗನೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಚೇರಿಯ ಪಕ್ಕದ ವಠಾರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಸಮೀಪದ ಅಗರಬತ್ತಿ ಪ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.ಈ ನಡುವೆ ಮತ್ತೆ ಪತಿಯ ಜತೆ ನಾಗಮ್ಮ ಸಖ್ಯ ಬೆಳೆಸಿದ್ದರು. ಪತಿಯ ಹಣಕಾಸಿನ ಕಷ್ಟ ಅರಿತ ಈಕೆ ನೆರೆಹೊರೆಯವರಿಂದ 30 ಸಾವಿರ ರೂ. ಸಾಲ ಕೊಡಿಸಿದ್ದಳು.ಸಾಲಗಾರರ ಒತ್ತಡ ಹೆಚ್ಚಾದಾಗ ಮಗನನ್ನು ಕರೆದುಕೊಂಡು ಪತಿ ವಾಸವಾಗಿದ್ದ ಮಳವಳ್ಳಿ ತಾಲ್ಲೂಕಿನ ದಬ್ಬನಹಳ್ಳಿಗೆ ಹೋಗಿ ಹಣ ತಂದುಕೊಡುವುದಾಗಿ ಹೇಳಿ ಸೆ.13ರಂದು ನಾಗಮ್ಮ ಹೋಗಿದ್ದಾರೆ.ಆದರೆ, ಅಂದಿನಿಂದ ನಾಗಮ್ಮ ನಾಪತ್ತೆಯಾಗಿದ್ದು, ಇದೀಗ ಗ್ರಾಮಾಂತರ ಠಾಣೆ ವ್ಯಾಪ್ತಿಯ ಸಂತೆಮೊಗಳ್ಳಿಯ ಖಾಲಿ ಕೆರೆಯ ಪೊದೆಯ ಬಳಿ ಶವವಾಗಿ ಪತ್ತೆಯಾಗಿದ್ದಾಳೆ.ಕುರಿಮೇಯಿಸುತ್ತಿದ್ದ ಕುರಿಗಾಯಿಗಳು ಮುಳ್ಳಿನ ಪೊದೆಯಿಂದ ಬರುತ್ತಿದ್ದ ವಾಸನೆ ಗಮನಿಸಿ ಹತ್ತಿರ ಹೋಗಿ ನೋಡಿ ಬೆದರಿ ಚೀರಿಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಸುದ್ದಿ ತಿಳಿದ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ.

ಪತಿಯ ಸುತ್ತ ಅನುಮಾನದ ಹುತ್ತ:
ಹಣ ಹಿಂದಿರುಗಿಸುವ ವಿಚಾರವಾಗಿ ಪತಿ-ಪತ್ನಿ ನಡುವೆ ಜಗಳ ನಡೆದು ಈ ಕೃತ್ಯವೆಸಗಿರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ.
ಈಕೆ ಪತಿಯನ್ನು ನೋಡಲು ತನ್ನ ಮಗನ ಜೊತೆ ಮಂಗಳವಾರ ಹೋಗಿದ್ದು ಬುಧವಾರ ಆಕೆಯ ಮಗ ಹೊಂಗನೂರು ಗ್ರಾಮದ ರಸ್ತೆಯಲ್ಲಿ ಮುಂಜಾನೆ ಅಳುತ್ತಾ ನಿಂತಿದ್ದನೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದು ಆಕೆಯ ಮಗ ನಂದನನ್ನು ಮುಂಜಾನೆ ಕರೆತಂದು ಬಿಟ್ಟವರ್ಯಾರು ಎಂಬುದು ನಿಗೂಢವಾಗಿದೆ.ನಂತರ ಸ್ಥಳೀಯರು ಅಳುತ್ತಾ ನಿಂತಿದ್ದ ಮಗ ನಂದನನ್ನು ಮನೆಗೆ ಕರೆದುಕೊಂಡು ಹೋಗಿ ತಿಂಡಿ ತಿನ್ನಿಸಿ ಆತ ಬರುತ್ತಿದ್ದ ಅಂಗನವಾಡಿಗೆ ಬಿಟ್ಟು ಆಕೆಯ ತಾಯಿ ಸುಳಿವು ಇಲ್ಲದಿರುವುದರಿಂದ ಆಕೆಯ ತಮ್ಮನಿಗೆ ಮಾಹಿತಿ ನೀಡಿ ಮಗ ನಂದನನ್ನು ಆತನ ಸುಪರ್ದಿಗೆ ವಹಿಸಿದ್ದಾರೆ.
ಪಕ್ಕದ ಮನೆಯಾತ ಪೊಲೀಸ್ ವಶಕ್ಕೆ:
ನಾಗಮ್ಮಳ ಮೊಬೈಲ್ ಬುಧವಾರದಿಂದ ಸ್ವಿಚ್‍ಆಫ್ ಆಗಿದ್ದು ಕೊಲೆಗಾರರು ಮಂಗಳವಾರವೇ ಆಕೆಯನ್ನು ಕೊಲೆ ಮಾಡಿ ಕೆರೆ ಬಳಿಯ ಮುಳ್ಳಿನ ಪೊದೆಯಲ್ಲಿ ತಂದು ಬಿಸಾಡಿರ ಬಹುದೆನ್ನಲಾಗಿದ್ದು ಸುಮಾರು 5 ದಿನಗಳು ಸಂದಿದ ಶವ ಸಂಪೂರ್ಣವಾಗಿ ಊದಿಕೊಂಡು ಕೊಳೆತು ದುರ್ವಾಸನೆ ಬಿರುವ ಹಂತಕ್ಕೆ ಹೋಗಿದೆ.ಆಕೆಯ ಮೊಬೈಲ್ ಸಂಖ್ಯೆಯನ್ನು ಪಡೆದ ಪೊಲೀಸರು ಆಕೆಗೆ ಬರುತ್ತಿದ್ದ ಒಳಕರೆ ಹಾಗೂ ಹೊರ ಕರೆಗಳನ್ನು ಆಲಿಸಿದಾಗ ಆಕೆಯು ಕಾಣೆಯಾದ ಹಿಂದಿನ ದಿನ ಆಕೆಯ ಮೊಬೈಲ್‍ಗೆ ಸಾಕಷ್ಟು ಕರೆಗಳನ್ನು ನಾಗಮ್ಮ ವಾಸವಿದ್ದ ಪಕ್ಕದ ಮನೆಯಾತ ಮಾಡಿದ ಕರೆಗಳನ್ನು ಪತ್ತೆಹಚ್ಚಿದ್ದಾರೆನ್ನಲಾಗಿದೆ.ಈಗಾಗಲೇ ಪೊಲೀಸ್ ವಶದಲ್ಲಿ ವಿಚಾರಣೆ ಎದುರಿಸುತ್ತಿರುವ ಆತ ಆಕೆಯ ಮೊಬೈಲ್‍ನಲ್ಲಿ ನಿರಂತರ ಸಂಪರ್ಕದಲ್ಲಿದ್ದನೆಂದು ತಿಳಿದು ಬಂದಿದ್ದು ಪೊಲೀಸರು ಹಲವಾರು ಮಜಲುಗಳಿಂದ ತನಿಖೆ ಕೈಗೊಂಡಿದ್ದಾರೆನ್ನಲಾಗಿದೆ.
ಪತಿಯ ಶೋಧಕ್ಕಾಗಿ ಪೊಲೀಸರ ಬಲೆ:
ಪ್ರಕರಣ ಸಂಪೂರ್ಣವಾಗಿ ಅವರಿಸಿ ಕೊಂಡಿರುವ ನಾಗಮ್ಮನ ಪತಿ ಆನಂದನ ಮೇಲೆ ಕೇಂದ್ರಿಕೃತವಾಗಿದ್ದು ಪ್ರಕರಣದ ತನಿಖೆ ಹೊತ್ತಿರುವ ಪೊಲೀಸ್ ತಂಡ ಆತನ ಪತ್ತೆಗೆ ತೀವ್ರ ಕಾರ್ಯಾಚರಣೆ ಕೈಗೊಂಡಿದ್ದಾರೆ.

 

► Follow us on –  Facebook / Twitter  / Google+

 

Facebook Comments

Sri Raghav

Admin