ನಾಯಿಮರಿ ನುಂಗಿ ಜೀರ್ಣಿಸಿಕೊಳ್ಳಲೂ ಆಗದೆ, ಹೊರಗೂ ಹಾಕಲಾಗದೆ ಒದ್ದಾಡಿದ ಹಾವು

Snake--01

ಕೆಜಿಎಫ್, ಜು.6-ಹಸಿದಿದ್ದ ಮಂಡಲ ಹಾವೊಂದು ನಾಯಿ ಮರಿಯನ್ನು ನುಂಗಿ ಹೊರಗೂ ಹಾಕಲಾಗದೆ, ಜೀರ್ಣಿಸಿಕೊಳ್ಳಲು ಆಗದೆ ಒದ್ದಾಡುತ್ತಿದ್ದ ದೃಶ್ಯ ಬೆಮಲ್‍ನಗರದಲ್ಲಿ ಕಂಡುಬಂತು. ಬೆಮೆಲ್ ನಗರದ ದಾಸಹೊಕ್ಕರಹಳ್ಳಿಯ ಮನೆಯೊಂದರಲ್ಲಿ ನಾಯಿಯೊಂದು ಮರಿ ಹಾಕಿದ್ದು , ಇಲ್ಲಿಗೆ ಬಂದ ಮಂಡಲ ಹಾವು ಮರಿಯೊಂದನ್ನು ನುಂಗಿಹಾಕಿದೆ.  ಇದರಿಂದ ತಾಯಿ ನಾಯಿ ಹಾಗೂ ಇತರೆ ಮರಿಗಳು ಗಾಬರಿಯಿಂದ ಬೊಗಳುತ್ತಿದ್ದು , ಇದನ್ನು ಗಮನಿಸಿದ ಮನೆಯ ಮಾಲೀಕ ಮತ್ತು ಸದಸ್ಯರು ಬಂದು ನೋಡಿದಾಗ ಮಂಡಲ ಹಾವು ಇರುವುದು ಕಂಡುಬಂದಿದೆ. ನಾಯಿಮರಿಗಳನ್ನು ಎಣಿಸಿದಾಗ ಒಂದು ನಾಯಿಮರಿ ಕಡಿಮೆಯಿತ್ತು. ಹಾವೇ ನಾಯಿ ಮರಿಯನ್ನು ನುಂಗಿದೆ ಎಂದು ಕೂಡಲೇ ಸ್ನೇಕ್ ರಾಜನನ್ನು ಕರೆಸಿ ಹಾವನ್ನು ಹಿಡಿಸಿದ್ದಾರೆ.

ಹಿಡಿದ ಹಾವನ್ನು ಕೃಷ್ಣಾವರಂ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ. ಸ್ನೇಕ್ ರಾಜು ಕಳೆದ 17 ವರ್ಷಗಳಿಂದ ಹಾವುಗಳನ್ನು ಹಿಡಿಯುವ ವೃತ್ತಿಯನ್ನು ಮಾಡಿಕೊಂಡು ಬರುತ್ತಿದ್ದಾರೆ. ಇದುವರೆಗೂ ಆರೂವರೆ ಸಾವಿರ ವಿವಿಧ ಜಾತಿಯ ಹಾವುಗಳನ್ನು ಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ.   ನಾಲ್ಕೈದು ಬಾರಿ ಹಾವುಗಳು ಕಚ್ಚಿವೆ. ಒಂದು ಬಾರಿ ಕಚ್ಚಿದರೆ ಆಸ್ಪತ್ರೆಯ ವೆಚ್ಚ 15ರಿಂದ 20 ಸಾವಿರ ಆಗುತ್ತದೆ. ನಾನು ಯಾರಿಂದಲೂ ಹಣ ಪಡೆಯುವುದಿಲ್ಲ. ಇದು ನನ್ನ ಹವ್ಯಾಸವಷ್ಟೇ ಎಂದು ರಾಜು ಪತ್ರಿಕೆಯೊಂದಿಗೆ ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Sri Raghav

Admin