ನಾಯಿ ತಿನ್ನಲು ಗ್ರಾಮಕ್ಕೆ ನುಗ್ಗಿದ ಚಿರತೆ

chirate

ಮಾಗಡಿ, ಜ.17- ನಾಯಿ ತಿನ್ನಲು ಗ್ರಾಮಕ್ಕೆ ನುಗ್ಗಿದ ಚಿರತೆಯೊಂದು ಸಿಕ್ಕಿಬಿದ್ದಿರುವ ಘಟನೆ ತಾಲೂಕಿನ ಗುಡ್ಡಹಳ್ಳಿ ಗ್ರಾಮದಲ್ಲಿ ಕಳೆದ ರಾತ್ರಿ ನಡೆದಿದೆ.  ಸುಮಾರು 2.30ರ ಸಂದರ್ಭದಲ್ಲಿ ರಮೇಶ್ ಎಂಬುವರ ಮನೆಯಲ್ಲಿ ಇದ್ದ ನಾಯಿಯನ್ನು ಬೇಟೆಯಾಡಲು ಚಿರತೆ ಒಳನುಗ್ಗಿದೆ.ನಾಯಿ ಅರಚುತ್ತಿದ್ದುದನ್ನು ಕಂಡು ಎಚ್ಚರಗೊಂಡ ಮನೆಯವರು, ಹೊರಗೋಡಿ ಬಂದು ನೋಡಿದಾಗ ಚಿರತೆ ಬಂದಿರುವುದು ಗೊತ್ತಾಗಿದೆ.

IMG-20170117-WA0044

ತಕ್ಷಣ ಮನೆಯ ಬಾಗಿಲನ್ನು ಹಾಕಿ ಪೊಲೀಸರಿಗೆ ಹಾಗೂ ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಇಷ್ಟಾದರೂ ನಾಯಿಯನ್ನು ತಿನ್ನುತ್ತಾ ಚಿರತೆ ಗರ್ಜಿಸುತ್ತಲೇ ಇತ್ತು. ಮುಂಜಾನೆ 5 ಗಂಟೆ ಸಮಯದಲ್ಲಿ ಸ್ಥಳಕ್ಕಾಗಮಿಸಿದ ಅರಣ್ಯ ಸಿಬ್ಬಂದಿ ಅದನ್ನು ಸೆರೆ ಹಿಡಿಯಲು ಪ್ರಯತ್ನಿಸಿದರೂ ಅದು ಅಪಾಯ ಎಂದು ತಿಳಿದ ನಂತರ ಬೆಂಗಳೂರಿನಿಂದ ಅರವಳಿಕೆ ತಜ್ಞರನ್ನು ಕರೆಸಲಾಯಿತು.ನಂತರ 8 ಗಂಟೆ ಸಂದರ್ಭದಲ್ಲಿ ಚಿರತೆಯನ್ನು ಹಿಡಿದು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ರವಾನಿಸಲಾಗಿದೆ.

IMG-20170117-WA0038
ರಮೇಶ್ ಎರಡು ನಾಯಿಗಳಲ್ಲಿ ಒಂದು ಚಿರತೆಗೆ ಆಹಾರವಾಗಿದ್ದರೆ ಇನ್ನೊಂದು ತಪ್ಪಿಸಿಕೊಂಡಿದೆ. ಮನೆಯವರೆಲ್ಲರೂ ಮಲಗಿದ್ದಾಗಲೇ ಚಿರತೆ ಗ್ರಾಮಕ್ಕೆ ನುಗ್ಗಿರುವುದು ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ. ನಾಯಿಯಿಂದಾಗಿ ನಮ್ಮ ಜೀವ ಉಳಿಯಿತಲ್ಲಾ ಎಂದು ರಮೇಶ್ ಕುಟುಂಬದವರು ನಿಟ್ಟುಸಿರು ಬಿಟ್ಟಿದ್ದಾರೆ. ಮಾಗಡಿ ಪೊಲೀಸ್ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಮಂಜುನಾಥ್, ವಲಯ ಅರಣ್ಯ ಸಂರಕ್ಷಣಾಧಿಕಾರಿ ದಾಳೇಶ್ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿದ್ದರು. ಈ ಘಟನೆ ಕುರಿತು ಪ್ರಗತಿಪರ ರೈತ ಕುಂಬಳಕಾಯಿ ಗಂಗಣ್ಣ ಮಾತನಾಡಿ, ಕಳೆದ 10 ವರ್ಷಗಳಿಂದ ವನ್ಯ ಮೃಗಗಳ ಉಪಟಳ ಹೆಚ್ಚಾಗಿದ್ದು, ರೈತರು ಆತಂಕದಲ್ಲಿ ಬದುಕುವಂತಾಗಿದೆ. ಕಳೆದ ಆರು ತಿಂಗಳಿನಿಂದ ಹತ್ತಾರು ಕುರಿಗಳು, ಸಾಕುಪ್ರಾಣಿಗಳು ಚಿರತೆಗೆ ಆಹಾರವಾಗಿವೆ ಎಂದು ಆತಂಕವ್ಯಕ್ತಪಡಿಸಿದರು.

IMG-20170117-WA0041

IMG-20170117-WA0043

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin