ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ

k-r-pete

ಕೆಆರ್ ಪೇಟೆ, ಅ.12-ಗಂಡನ ಕಿರುಕುಳ ತಾಳಲಾರದೆ ಹೇಮಾವತಿ ನಾಲೆಗೆ ಹಾರಿ ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಮ್ಮಡಹಳ್ಳಿ ಗ್ರಾಮದಲ್ಲಿ ನಡೆದಿದೆ. ಅಮ್ಮಡಹಳ್ಳಿ ಗ್ರಾಮದ ಮೋಹನ್‍ಕುಮಾರ್ ಎಂಬುವರ ಪತ್ನಿ ಅನ್ನಪೂರ್ಣ (32) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.

ಜಾವಡಘಟ್ಟ ಗ್ರಾಮದ ಚೋಟೇಗೌಡ-ಪುಟ್ಟಮ್ಮ ದಂಪತಿ ಪುತ್ರ ಮೋಹನ್‍ಕುಮಾರ್ ಎಂಬುವರಿಗೆ ಅನ್ನಪೂರ್ಣ ಅವರನ್ನು ಕೊಟ್ಟು ವಿವಾಹ ಮಾಡಲಾಗಿತ್ತು. ಈಕೆಗೆ ಮೂವರು ಹೆಣ್ಣು ಮಕ್ಕಳಿದ್ದು, ತವರೂರು ಜಾವಡಘಟ್ಟ ಗ್ರಾಮದ ಬಳಿ ಹರಿಯುವ ಹೇಮಾವತಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಆರ್ ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Sri Raghav

Admin