ನಾಳೆಯಿಂದ ತೆರೆ ಮೇಲೆ ‘ಹ್ಯಾಪಿ ನ್ಯೂ ಇಯರ್’

Spread the love

happy-3
ಬಹಳ ವರ್ಷಗಳ ನಂತರ ಕೌರವ ಬಿ.ಸಿ.ಪಾಟೀಲ್ ತೆರೆಯ ಮೇಲೆ ಮಿಂಚುವುದರ ಜತೆಗೆ ಚಿತ್ರ ನಿರ್ಮಾಣವನ್ನು ಮಾಡಿ ತಮ್ಮ ಪುತ್ರಿ ಸೃಷ್ಟಿ ಪಾಟೀಲ್‍ರನ್ನು ಬೆಳ್ಳಿ ಪರದೆಗೆ ಪರಿಚಯಿಸುವ ಮೂಲಕ ಮತ್ತೆ ಸ್ಯಾಂಡಲ್‍ವುಡ್‍ನಲ್ಲಿ ದೊಡ್ಡ ಮಟ್ಟದ ಸದ್ದನ್ನು ಮಾಡಲು ಮುಂದಾಗಿದ್ದಾರೆ. ಜೊತೆಗೆ ಒಂದಷ್ಟು ಯುವ ಪ್ರತಿಭೆಗಳನ್ನೂ ಚಿತ್ರರಂಗಕ್ಕೆ ಕರೆ ತರುತ್ತಿದ್ದಾರೆ.  ಹಿರಿಯ ನಿರ್ದೇಶಕ ನಾಗಾಭರಣರ ಪುತ್ರ ಪನ್ನಗಾಭರಣ ಈ ಚಿತ್ರದ ನಿರ್ದೇಶಕನಾಗಿ ಬಡ್ತಿ ಪಡೆದಿದ್ದಾರೆ.
ಈ ವಾರ ರಾಜ್ಯಾದ್ಯಂತ ತೆರೆಗೆ ಬರಲು ಸಿದ್ದವಾಗಿರುವ ಹ್ಯಾಪಿ ನ್ಯೂ ಈಯರ್ ಚಿತ್ರತಂಡ ರಿಲೀಸ್‍ಗೆ ತುದಿಗಾಲಲ್ಲಿ ನಿಂತಿರುವ ತಮ್ಮ ಚಿತ್ರದ ವಿಶೇಷತೆಗಳ ಕುರಿತು ಮಾಧ್ಯಮಗಳೊಂದಿಗೆ ಕೆಲವಿಚಾರಗಳನ್ನು ಹಂಚಿಕೊಂಡಿತು. happy-4
ತನ್ನ ಪ್ರಥಮ ಪ್ರಯತ್ನದ ಬಗ್ಗೆ ಮಾತನಾಡಿದ ನಿರ್ದೇಶಕ ಪನ್ನಗಾಭರಣ ನಮ್ಮ ಚಿತ್ರದಲ್ಲಿ ಒಟ್ಟು 5 ಕಥೆಗಳನ್ನು ಒಮ್ಮೆಗೇ ಹೇಳುವ ಪ್ರಯತ್ನ ಮಾಡಲಾಗಿದ್ದು, ಪ್ರೇಕ್ಷಕರಿಗೆ ಚಿತ್ರದ ಕ್ಲೈಮ್ಯಾಕ್ಸ್‍ನಲ್ಲಿ ಸ್ಪಷ್ಟ ಚಿತ್ರಣ ಸಿಗುತ್ತದೆ. ಹೀಗೆ 5 ಪ್ರಮುಖ ಪಾತ್ರಗಳೂ ಚಿತ್ರದಲ್ಲಿ ಬೇರೆ ಬೇರೆಯಾಗಿ ಮೂಡಿ ಬರುತ್ತವೆ. ಈಗಾಗಲೇ ಹಾಡುಗಳಿಗೆ ಎಲ್ಲಾ ಕಡೆಗಳಿಂದ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಬಂದಿತು. ಅದರಲ್ಲೂ 3 ಹಾಡುಗಳನ್ನಂತೂ ಕೇಳಿದವರೆಲ್ಲರೂ ಇಷ್ಟಪಟ್ಟಿದ್ದಾರೆ. ಅಲ್ಲದೆ ನಮ್ಮ ಚಿತ್ರದಲ್ಲಿ ಬರುವ 5 ಪಾತ್ರಗಳನ್ನು ಎಲ್ಲರೂ ಗುರುತಿಸುವಂತಾಗಲಿ ಎಂಬ ಉದ್ದೇಶದಿಂದ ವಿಶೇಷವಾಗಿ 5 ಟೀಸರ್‍ಗಳನ್ನು ರೆಡಿ ಮಾಡಿದ್ದೆವು. ಈಗಾಗಲೇ ಬಿ.ಸಿ.ಪಾಟೀಲ್ ಹಾಗೂ 5 ಲವ್ ಸ್ಟೋರಿಗಳ ಮೂಲಕ ಪ್ರೀತಿಯ ಬೇರೊಂದು ಮುಖವನ್ನು ತೋರಿಸಲು ಪ್ರಯತ್ನಿಸಿದ್ದೇವೆ. ಎಮೋಷನ್ಸ್, ಆ್ಯಕ್ಷನ್, ರೊಮ್ಯಾನ್ಸ್ ಎಲ್ಲಾ ಇರುವ ಕಂಪ್ಲೀಟ್ ಫ್ಯಾಮಿಲಿ ಎಂಟರ್‍ಟೈನರ್ ಆಗಿ ಈ ಚಿತ್ರ ಮೂಡಿಬರಲಿದೆ.happy-2

ಸ್ಲಂ ಟು ಸಾಪ್ಟ್‍ವೇರ್ ಎಂದು ಬಿ.ಸಿ.ಪಾಟೀಲರ ಪಾತ್ರದ ಮೂಲಕ ತೋರಿಸಿದ್ದೇವೆ. ನ್ಯೂ ಈಯರ್ ಎಂದರೆ ಎಲ್ಲರೂ ಸೇರಿ ಸೆಲಬ್ರೇಷನ್ ಮಾಡುವ ಒಂದು ಹಬ್ಬ. ಅಂಥಾ ಸಮಯದಲ್ಲಿ ಏನಾಗುತ್ತೆ ಅಂತ ಚಿತ್ರದಲ್ಲಿ ಇಂಟರೆಸ್ಟಿಂಗ್ ಆಗಿ ತೋರಿಸಿದ್ದೇವೆ ಎಂದು ಕೂಡ ನಿರ್ದೇಶಕ ಪನ್ನಗಾಭರಣ ಹೇಳಿಕೊಂಡರು. ಐದಾರು ವರ್ಷ ಗ್ಯಾಪ್ ತೆಗೆದುಕೊಂಡರೂ ಒಂದು ಒಳ್ಳೇ ಸಿನಿಮಾದ ಮೂಲಕ ಮತ್ತೆ ಸ್ಕ್ರೀನ್‍ಮೇಲೆ ಬರುತ್ತಿರುವುದಕ್ಕೆ ಖುಷಿಯಾಗ್ತಿದೆ. ತಿಂಗಳು, ದಿನಾಂಕ ಹಾಗೂ ಕಥೆಗಳ ನಂಬರ್ ಒಂದೇ ಆಗಿರುವುದರಿಂದ ಚಿತ್ರಕ್ಕೆ 555 ಅಂತಲೂ ಕರೆಯಬಹುದಾಗಿದೆ. ನಮಗೆ 12ಕ್ಕೆ ಬರುವ ಪ್ಲಾನ್ ಇತ್ತು. ಆದರೆ ವಿತರಕರ ಸಲಹೆಯ ಮೇರೆಗೆ ಒಂದು ವಾರ ಮುಂಚೆ ಅಂದರೆ, ಮೇ 5ಕ್ಕೇ ಬರ್ತಿದ್ದೇವೆ. ಚಿತ್ರದಲ್ಲಿ ಎಲ್ಲಾ ವರ್ಗದ ಜನ ಇಷ್ಟಪಡುವಂಥ ಅಂಶಗಳಿವೆ.

ಚಿತ್ರದ ಬಗ್ಗೆ ತುಂಬಾ ನಿರೀಕ್ಷೆಗಳಿದ್ದು, ನಾವು ಕೂಡ ಚಿತ್ರ ಬಿಡುಗಡೆಗೆ ಕಾತುರರಾಗಿದ್ದೇವೆ ಎನ್ನುತ್ತಾರೆ ನಾಯಕನಟ ಬಿಸಿ.ಪಾಟೀಲ್.ಈ ಚಿತ್ರದಲ್ಲಿ ಒಬ್ಬ ಸ್ಲಮ್ ರೌಡಿಯಾಗಿ ಬಿ.ಸಿ. ಪಾಟೀಲ್, ಸಾಫ್ಟ್‍ವೇರ್ ಉದ್ಯೋಗಿಯಾಗಿ ದಿಗಂತ್, ಆತನ ಜೊತೆಗಾತಿಯಾಗಿ ಸೃಷ್ಟಿ ಪಾಟೀಲ್, ಆರ್.ಜೆ. ಆಗಿ ಧನಂಜಯ್, ಪೊಲೀಸ್ ಕಾನ್ಸ್‍ಸ್ಟೇಬಲ್ ಆಗಿ ವಿಜಯ್ ರಾಘವೇಂದ್ರ, ಆತನ ಪತ್ನಿಯಾಗಿ ಸೋನು ಗೌಡ, ಶೋ ರೂಂ ಮಾಲೀಕನಾಗಿ ಸಾಯಿಕುಮಾರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಶ್ರುತಿ ಹರಿಹರನ್, ಸುಧಾ ರಾಣಿ, ಮಾಳವಿಕ ಅವಿನಾಶ್, ರಾಕ್‍ಲೈನ್ ವೆಂಕಟೇಶ್, ಕಡ್ಡಿಪುಡಿ ಚಂದ್ರು, ತಬಲಾ ನಾಣಿ, ರಾಜು ತಾಳಿಕೋಟೆ, ರಾಜಶ್ರೀ ಪೊನ್ನಪ್ಪ, ಮಾರ್ಗರೇಟ್ (ರಷ್ಯಾ) ಮೊದಲಾದ ಕಲಾವಿದರ ತಾರಾಗಣ ಚಿತ್ರದಲ್ಲಿದೆ.

happy-1
ನಿರ್ದೇಶಕ ನಾಗಾಭರಣ ಪುತ್ರ ಪನ್ನಗಾಭರಣ ಮೊದಲ ಬಾರಿಗೆ ನಿರ್ದೇಶಕನಾಗಿ ಆ್ಯಕ್ಷನ್-ಕಟ್ ಹೇಳಿರುವ ಹ್ಯಾಪಿ ನ್ಯೂ ಇಯರ್ ಚಿತ್ರದ ಹಾಡುಗಳಿಗೆ ಸ್ವರ ಮಂತ್ರಿಕ ರಘು ದೀಕ್ಷಿತ್ ರಾಗ ಸಂಯೋಜನೆ ಮಾಡಿದ್ದಾರೆ. ಶ್ರೀಶ ಕೂಡುವಳ್ಳಿ ಛಾಯಾಗ್ರಹಣ, ಸಿಂಪಲ್ ಸುನಿ, ಪ್ರತಿಭಾ ನಂದಕುಮಾರ್, ಸತ್ಯಪ್ರಕಾಶ್, ಆದಿ ಶಂಕರ್ ಹಾಗೂ ಅವಿನಾಶ್ ಬಲೆಕ್ಕಳ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಸೌಮ್ಯ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ವನಜಾ ಪಾಟೀಲ್ ನಿರ್ಮಿಸಿದ್ದಾರೆ. ನಿರೀಕ್ಷೆಯೊಂದಿಗೆ ಬಿಡುಗಡೆಗೊಳ್ಳುತ್ತಿರುವ ಈ ಹ್ಯಾಪಿ ನ್ಯೂ ಇಯರ್ ಚಿತ್ರ ಫ್ಯಾಮಿಲಿ ಎಂಟರ್‍ಟೈನರ್ ಆಗಿದ್ದು, ಪ್ರತಿಯೊಬ್ಬರ ಮನ ಗೆಲ್ಲಲಿದೆ ಎಂಬ ವಿಶ್ವಾಸ ಚಿತ್ರ ತಂಡಕ್ಕಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin