ನಾಳೆಯಿಂದ ದೇಶದ 7 ಪ್ರಮುಖ ವಿಮಾನನಿಲ್ದಾಣಗಳಲ್ಲಿ ನೂತನ ಭದ್ರತಾ ವ್ಯವಸ್ಥೆ

Spread the love

Aiports--01

ನವದೆಹಲಿ/ಮುಂಬೈ, ಮಾ.31-ಪ್ರಯಾಣಿಕರ ಬ್ಯಾಗ್‍ಗಳ ಮೇಲೆ ಮುದ್ರೆ ಒತ್ತುವ ಮತ್ತು ಲೇಬಲ್ ಅಂಟಿಸುವ ವಿಧಾನಗಳು ಬೆಂಗಳೂರು ಸೇರಿದಂತೆ ದೇಶದ ಏಳು ಪ್ರಮುಖ ವಿಮಾನನಿಲ್ದಾಣಗಳಲ್ಲಿ ಇಂದು ಕೊನೆಗೊಳ್ಳಲಿದ್ದು, ನಾಳೆಯಿಂದ (ಏ.1) ಹೊಸ ವ್ಯವಸ್ಥೆ ಜಾರಿಗೆ ಬರಲಿದೆ. ಹೊಸ ವಿಧಾನವು ಪ್ರಯಾಣಿಕರಿಗೆ ತೊಂದರೆ ರಹಿತ ಪ್ರಯಾಣಕ್ಕೆ ಪೂರಕವಾಗಲಿದೆ. ನವದೆಹಲಿ, ಮುಂಬೈ, ಬೆಂಗಳೂರು, ಹೈದರಾಬಾದ್, ಕೊಲ್ಕತಾ, ಕೊಚ್ಚಿ ಮತ್ತು ಅಹಮದಾಬಾದ್ ಏರ್‍ಪೋರ್ಟ್‍ಗಳಲ್ಲಿ ಏ.1ರಿಂದ ಹೊಸ ಭದ್ರತಾ ವ್ಯವಸ್ಥೆ ಜಾರಿಗೊಳ್ಳಲಿದೆ ಎಂದು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‍ಎಫ್) ಮೂಲಗಳು ತಿಳಿಸಿವೆ.

ನೂತನ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಬಗ್ಗೆ ಈ ಹಿಂದೆಯೇ ನಾಗರಿಕ ವಿಮಾನಯಾನ ಸಚಿವಾಲಯವು ಭದ್ರತಾ ಕಾರ್ಯಾಲಯಗಳಿಗೆ ಸೂಚಿಸಿತ್ತು. ಆದರೆ, ಏರ್‍ಪೋರ್ಟ್‍ಗಳಲ್ಲಿ ಸೂಕ್ತ ಕ್ರಮ ಕೈಗೊಂಡ ನಂತರವೇ ಹೊಸ ವಿಧಾನ ಜಾರಿಗೊಳಿಸಬೇಕೆಂದು ಸಿಐಎಸ್‍ಎಫ್ ಹೇಳಿತ್ತು.   ನೂತನ ವ್ಯವಸ್ಥೆ ಬಗ್ಗೆ ಸಿಬ್ಬಂದಿಗೆ ಮಾಹಿತಿ ನೀಡಲಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಈ ಕುರಿತು ಮಾಡಿಕೊಳ್ಳಲಾಗಿರುವ ವ್ಯವಸ್ಥೆಯನ್ನುಖುದ್ದು ಪರಿಶೀಲಿಸಿರುವುದಾಗಿ ಸಿಐಎಸ್‍ಎಫ್ ನಿರ್ದೇಶಕ ಜಿ.ಒ.ಪಿ.ಸಿಂಗ್ ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin