ನಾಳೆಯಿಂದ ಭಾರತ-ಬಾಂಗ್ಲಾ ಟೆಸ್ಟ್ : ಪ್ಲೇಯಿಂಗ್ ಎಲೆವನ್ ಸೇರಲು ಕರುಣ್-ರಹಾನೆ ಫೈಟ್
ಹೈದ್ರಾಬಾದ್,ಫೆ. 8- ಇಂಗ್ಲೆಂಡ್ ವಿರುದ್ಧ ನಡೆದ ಮೂರು ಸರಣಿಗಳಲ್ಲಿ ಜಯಭೇರಿ ಬಾರಿಸಿರುವ ವಿರಾಟ್ ಕೊಹ್ಲಿ ಸಾರಥ್ಯದ ಟೀಂ ಇಂಡಿಯಾ ನಾಳೆಯಿಂದ ಹೈದ್ರಾಬಾದ್ನಲ್ಲಿ ಬಾಂಗ್ಲಾದೇಶ ವಿರುದ್ಧ ನಡೆಯುವ ಏಕಮೇವ ಟೆಸ್ಟ್ ಗೆ ಸಜ್ಜಾಗಿದೆ. ಪಂದ್ಯದ ಆರಂಭಕ್ಕೂ ಮುನ್ನವೇ 11ರ ತಂಡದಲ್ಲಿ ಯಾರಿಗೆ ಸ್ಥಾನವನ್ನು ಕಲ್ಪಿಸಬೇಕೆಂಬ ಸವಾಲು ನಾಯಕ ವಿರಾಟ್ ಕೊಹ್ಲಿ ಹಾಗೂ ಆಯ್ಕೆಗಾರ ಅನಿಲ್ಕುಂಬ್ಳೆ ಮುಂದಿದೆ. ಆರಂಭಿಕ ಆಟಗಾರರಾಗಿ ಮುರಳಿವಿಜಯ್ ಹಾಗೂ ಕೆ.ಎಲ್.ರಾಹುಲ್ ಅವರು ಬ್ಯಾಟಿಂಗ್ ಮಾಡುವುದು ಶತಸಿದ್ಧ ಆದರೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಅಜೆಂಕ್ಯಾರಹಾನೆ, ಕನ್ನಡಿಗ ಕರುಣ್ನಾಯರ್, ತಮಿಳುನಾಡಿನ ರಣಜಿನಾಯಕ ಅಭಿನವ್ ಮುಕುಂದ್ ನಡುವೆ ತೀವ್ರ ಪೈಪೊಟಿ ಏರ್ಪಟ್ಟಿದೆ. ಈ ಮೂವರ ಪೈಕಿ ಯಾರನ್ನು ಅಂಗಳಕ್ಕಿಳಿಸಬೇಕೆಂದು ಈಗ ವಿರಾಟ್ ಮುಂದಿರುವ ಪ್ರಶ್ನೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ತ್ರಿಶತಕ ಗಳಿಸುವ ಮೂಲಕ ಕ್ರಿಕೆಟ್ ಪಂಡಿತರ ಗಮನ ಸೆಳೆದಿರುವ ಕನ್ನಡಿಗ ಕರುಣ್ನಾಯರ್ಗೆ ಸ್ಥಾನ ಕಲ್ಪಿಸಿದರೆ, ಅಜೆಂಕ್ಯಾ ರಹಾನೆ ಹಾಗೂ ಅಭಿನವ್ ಮುಕುಂದ್ರ ಪೈಕಿ ಯಾರಿಗೆ 11ರ ತಂಡದಲ್ಲಿ ಸ್ಥಾನವನ್ನು ಕಲ್ಪಿಸಬೇಕೆಂಬ ಲೆಕ್ಕಾಚಾರದಲ್ಲಿ ತರಬೇತುದಾರ ಕುಂಬ್ಳೆ ಮುಳುಗಿದ್ದಾರೆ. ಅಜೆಂಕ್ಯಾರಹಾನೆ ಭಾರತ ತಂಡದಲ್ಲಿ ಎಲ್ಲ ಪ್ರಕಾರದ ಆಟದಲ್ಲೂ ಈಗಾಗಲೇ ತಮ್ಮ ಸಾಮಥ್ರ್ಯವನ್ನು ತೋರಿಸಿರುವುದರಿಂದ ಅಭಿನವ್ ಮುಕುಂದ್ರನ್ನು ತಂಡದಿಂದ ಹೊರಗುಳಿಯುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಇನ್ನು ಟೆಸ್ಟ್ ಪಾದಾರ್ಪಣೆ ಮಾಡಲು ಸಜ್ಜಾಗಿರುವ ಹಾರ್ದಿಕ್ ಪಾಂಡ್ಯಾಗೂ ಕೂಡ 11ರ ತಂಡದಲ್ಲಿ ಗುರುತಿಸಿಕೊಳ್ಳುವುದು ಖಚಿತವಾಗಿರುವುದರಿಂದ ತಂಡದಲ್ಲಿರುವ ಐವರು ಸ್ಪೆಷಾಲಿಸ್ಟ್ ಬೌಲರ್ಗಳ ಪೈಕಿ ಒಬ್ಬರನ್ನು ಕೈ ಬಿಡುವ ಚಿಂತೆಗೂ ತರಬೇತುದಾರ ಅನಿಲ್ಕುಂಬ್ಳೆ ಮುಂದಾಗಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >