ನಾಳೆಯಿಂದ 4 ದಿನ ಪೆಟ್ರೋಲ್, ಡೀಸೆಲ್ ಸಿಗೋದು ಡೌಟ್..! : ಇಂದೇ ತುಂಬಿಸಿಕೊಳ್ಳಿ

Petrol-Bunkಬೆಂಗಳೂರು.ನ.02 : ನಿಮ್ಮ ಬೈಕ್ ನಲ್ಲಿ ಅಥವಾ ಕಾರ್ ನಲ್ಲಿ ಪೆಟ್ರೋಲ್ ಕಡಿಮೆಯಿದ್ದು, ನಾಳೆ ಅಥವಾ ನಾಡಿದ್ದು ತುಂಬಿಸಿಕೊಂಡರಾಯಿತೆಂದು ನಿರ್ಲಕ್ಷ ಮಾಡದಿರಿ, ಎಕೆಂದರೆ, ವಿವಿಧ ಬೇಡಿಕೆಗಳನ್ನಿಟ್ಟುಕೊಂಡು ಪ್ರತಿಭಟನೆಗೆ ಮುಂದಾಗಿರುವ ಬಂಕ್ ಮಾಲೀಕರು ನವೆಂಬರ್ 3, 4 ರಂದು ತೈಲ ಕಂಪನಿಗಳಿಂದ ಖರೀದಿ ನಿಲ್ಲಿಸಲಿದ್ದಾರೆ.  ನವೆಂಬರ್ 5ರ ಬೆಳಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ಮಾತ್ರ ಪೆಟ್ರೋಲ್ ಕಾರ್ಯನಿರ್ವಹಿಸಲು ನಿರ್ಧರಿಸಿದ್ದಾರೆ. 6ಗಂಟೆ ನಂತರ ಬಂಕ್ ಗಳು ಬಂದ್ ಆಗಲಿವೆ. ಬೇಡಿಕೆ ಈಡೇರುವವರೆಗೂ ರಾಜ್ಯಾದ್ಯಂತ ಪೆಟ್ರೋಲ್ ಬಂಕ್ ಗಳು ಕೇವಲ ಒಂದು ಪಾಳಿಯಲ್ಲಿ ತೆರೆದಿರಲಿವೆ ಎಂದು ಕರ್ನಾಟಕ ಪೆಟ್ರೋಲಿಯಂ ಡೀಲರ್ಸ್ ಫೆಡರೇಷನ್ ಅಧ್ಯಕ್ಷ ರವೀಂದ್ರನಾಥ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ನವೆಂಬರ್ 3, 4 ರಂದು ಪೆಟ್ರೋಲ್ ಬಂಕ್ ಗಳು ಎಂದಿನಂತೆ ಕಾರ್ಯನಿರ್ವಹಿಸಿದರೂ, ತೈಲ ಖರೀದಿ ನಿಲ್ಲಿಸುವುದರಿಂದ ಪೂರೈಕೆಯಲ್ಲಿ ತೊಂದರೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.  ಕಮಿಷನ್ ಹೆಚ್ಚಳ, ಲ್ಯೂಬ್ ಡಂಪಿಂಗ್ ಸ್ಥಗಿತ, ಅಧಿಕಾರಿಗಳ ಕಿರುಕುಳ ತಡೆ, ಪೆಟ್ರೋಲಿಯಂ ಉತ್ಪನ್ನಗಳ ಸಾಗಣೆ ವೆಚ್ಚ ಹೆಚ್ಚಳ ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಸಂಘ ಆಗ್ರಹಿಸಿ ಡೀಲರ್ಸ್ ಗಳು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

► Follow us on –  Facebook / Twitter  / Google+

Sri Raghav

Admin