ನಾಳೆ ಆರಾಧನಾ ಮಹೋತ್ಸವ

Spread the love

raghavendraswamy

ಹುಣಸೂರು, ಆ.17- ನಗರದ ಕಲ್ಕುಣಿಗೆ ಹೌಸಿಂಗ್ ಬೋರ್ಡ್‍ನ ಶ್ರೀ ಗುರುರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ಬೃಂದಾವನದಲ್ಲಿ ಗುರುಸಾರ್ವಭೌಮರ 345ನೇ ಆರಾಧಾನಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಮಠದ ಅಧ್ಯಕ್ಷ ಕೆ.ಪಿ.ಕೃಷ್ಣಚಾರ್ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಳೆ ಪ್ರಾರಂಭವಾಗುವ ಕಾರ್ಯಕ್ರಮದಲ್ಲಿ ಮುಂಜಾನೆ ಸತ್ಯನಾರಾಯಣ ಪೂಜೆ, ಧ್ವಜಪೂಜೆ, ಗೋಪೂಜೆ ಸ್ವಸ್ತಿವಾಹನ, ಮಹಾಮಂಗಳಾರತಿ ನಡೆಯಲಿದೆ.ಆ.19ರಂದು ಮುಂಜಾನೆ ಸುಪ್ರಭಾತ, ಪಂಚಾಮೃತ ಅಭಿಷೇಕ, ಗುರುರಾಘವೇಂದ್ರ ಸ್ವಾಮಿಗಳ ವೈಭವ ಹರಿಕಥೆ, ಆ.20 ಶನಿವಾರ ಗುರುರಾಯರಿಗೆ ಪಂಚಾಮೃತ ಅಭಿಷೇಕ, ಹುಣ್ಣಿಮೆ ಹಾಗೂ ಸ್ತ್ರೀ ಸಂಘ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ, ಆ.21 ಭಾನುವಾರ ರಂಗೋಲಿ ಸ್ವರ್ಧೆ, ಸುಮ್ ಸುಮ್ನೆ, ಆಟೋಟ ಸ್ಪರ್ಧೆ, ವೇಷ ಭೂಷಣ ಸ್ಪರ್ಧೆ, ಸಂಜೆ 7ಕ್ಕೆ ಬಹುಮಾನ ವಿತರಣೆ ನಡೆಯಲಿದೆ.
ಸಮಾರೋಪ ಸಮಾರಂಭದಲ್ಲಿ ಗಾವಡಗೆರೆ ಮಠದ ನಟರಾಜ ಸ್ವಾಮೀಜಿ, ಮೈಸೂರು ಯೋಗನರಸಿಂಹಸ್ವಾಮಿ ದೇವಸ್ಥಾನದ ಭಾಷ್ಯಂ ಸ್ವಾಮೀಜಿಗಳು ಉಪಸ್ಥಿತರಲಿದ್ದು , ಎಂಎಲ್‍ಸಿ ವಿಜಯಶಂಕರ್, ಸಂಸದರಾದ ಪ್ರತಾಪಸಿಂಹ, ಶಾಸಕರಾದ ಜಿ.ಟಿ.ದೇವೇಗೌಡ, ಮಂಜುನಾಥ್, ಚಿಕ್ಕಮಾದು, ಜಿ.ಪಂ ಸದಸ್ಯರಾದ ಡಾ.ಪುಷ್ಪಅಮರ್‍ನಾಥ್, ಜಯಲಕ್ಷ್ಮಿ ರಾಜಣ್ಣ, ಸಾವಿತ್ರಮ್ಮ ಮಂಜು, ಗೌರಮ್ಮ ಸೋಮಶೇಖರ್, ಅನಿಲ್ ಚಿಕ್ಕಮಾದು ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಪವಿಭಾಗಾಧಿಕಾರಿ ಡಾ.ಸೌಜನ್ಯ, ಎ.ಎಸ್.ಪಿ ಹರೀಶ್‍ಪಾಂಡೆ, ನಗರಸಭೆ ಅಧ್ಯಕ್ಷೆ ಧನಲಕ್ಷ್ಮಿರಾಜಣ್ಣ, ಸಿ.ಎ.ಒ ಶಿವಪ್ಪನಾಯ್ಕ ಸೇರಿದಂತೆ ಇತರೆ ಗಣ್ಯರು ಭಾಗವಹಿಸಲಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin