ನಾಳೆ ಡಾ.ಜಚನಿ 108ನೇ ಜಯಂತಿ

nidumadi

ಬಾಗೇಪಲ್ಲಿ, ಅ.19- ಚಿರಂತನ ಮೌಲ್ಯಗಳ ದರ್ಶನದಿಂದ ನುಡಿಬೆಳಗನ್ನು ಹೆಚ್ಚಿಸಿರುವ ಶ್ರೀ ಜಗದ್ಗುರು ಚನ್ನಬಸವರಾಜ ದೇಶಿಕೇಂದ್ರ ಶಿವಾಚಾರ್ಯ ನಿಡುಮಾಮಿಡಿ (ಜಚನಿ) ಮಹಾಸ್ವಾಮಿಗಳ 108ನೇ ಜಯಂತಿಯನ್ನು ನಾಳೆ ಏರ್ಪಡಿಸಲಾಗಿದೆ.ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲ್ಲೂಕು ಅಂಬಡಗಟ್ಟಿಯಲ್ಲಿ 1909 ರ ಅ. 20 ರಂದು ಜನ್ಮ ತಾಳಿದ ಡಾ.ಜಚನಿಯವರು 1924 ರಿಂದ 1936 ರವರೆಗಿನ 12 ವರ್ಷಗಳ ಕಾಲ ವಿಜಾಪುರ ಜಿಲ್ಲೆ ಬಾದಾಮಿ ತಾಲ್ಲೂಕಿನ ಶಿವಯೋಗಮಂದಿರದಲ್ಲಿ ಸಂಸ್ಕೃತಿಗೆ ವಿದ್ಯಾಭ್ಯಾಸ ಮಾಡಿದರು.
ಆಶುಕವಿಗಳಾದ ಪೂಜ್ಯರು ಬಾಲ್ಯದಲ್ಲಿಯೇ ವಚನ ಪದ್ಯ ಲೇಖನಗಳನ್ನು ಬರೆಯತೊಡಗಿದರು. 1933 ರಲ್ಲಿ ಕಾಳಿದಾಸನ ಮಾಲವಿಕಾಗ್ನಿ ಮಿತ್ರಂ ನಾಟಕವನ್ನು ಕನ್ನಡಕ್ಕೆ ಅನುವಾದಿಸಿದರು.

ಅಂದಿನ ಮೈಸೂರು ಮಹಾರಾಜರ ಆಯ್ಕೆಯಂತೆ ಬಾಗೇಪಲ್ಲಿ ತಾಲ್ಲೂಕು ನಿಡುಮಾಮಿಡಿ ಪೀಠಕ್ಕೆ 36ನೇ ಪೀಠಾಧೀಶರಾಗಿ ಅಧಿಕಾರ ಸ್ವೀಕರಿಸಿದರು.ಡಾ.ಜಚನಿ ಅವರು ಕಾವ್ಯ, ಕವನ, ತತ್ವ, ಜೀವನಚರಿತ್ರೆ, ನಾಟಕ, ಪ್ರಭಂದ, ವಚನ ದರ್ಶನ, ವಿಮರ್ಶೆ, ಲಾಕ್ಷಣಿಕ ಸಂಶೋಧನೆ, ಐತಿಹಾಸಿಕ ಧಾರ್ಮಿಕ ಅನುವಾದ ಸಂಪಾದನೆ ಪತ್ರಗಳು, ಪ್ರವಾಸ ಸಾಹಿತ್ಯ ಪ್ರಕಾರಗಳಲ್ಲಿ ಮೂರು ನೂರು ಕೃತಿಗಳನ್ನು ರಚಿಸಿ, ಪ್ರಕಟಿಸಿ ಕನ್ನಡ ಹಾಗೂ ಭಾರತೀಯ ಸಾಹಿತ್ಯ ಸಂಸ್ಕೃತಿಗೆ  ಅವಿಸ್ಮರಣೀಯ ಕೊಡುಗೆ ನೀಡಿದ್ದಾರೆ. ಕಾಳಿದಾಸನ ಸಂಸ್ಕೃತಿಗೆ  ಗ್ರಂಥಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿದವರು, ಕನ್ನಡದಲ್ಲಿ ಮೊದಲ ಕೈಬರಹ ಮಾಸ ಪತ್ರಿಕೆ ಹೊರತಂದವರು. ಅಕ್ಕನ ಬಳಗೆ ಮಹಿಳೆಯ ಸಂಘಟಣೆಯನ್ನು ಸ್ಥಾಪಿಸಿ, ತನ್ನ 88ನೇ ವಯಸ್ಸಿನಲ್ಲಿ 1997 ರಲ್ಲಿ ಕಾಲವಾದರು. ಇಂದು 108 ನೇ ಜಯಂತಿ.

ಕಾರ್ಯಕ್ರಮವೂ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಲಿದ್ದು, ನಿಡುಮಾಮಿಡಿ ಪೀಠದ ಈಗಿನ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ. ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಉದ್ಘಾಟಿಸಲಿದ್ದು, ಡಾ.ಕೆ.ಎಂ.ನಯಾಜ್‍ಅಹಮದ್ ಪ್ರಧಾನ ಭಾಷಣ ಮಾಡಲಿದ್ದಾರೆ.

 

► Follow us on –  Facebook / Twitter  / Google+

Sri Raghav

Admin