ನಾಳೆ ಬಿಗ್ ಬ್ರೇಕಿಂಗ್ ನ್ಯೂಸ್ ಕೊಡ್ತಾರಂತೆ ಯಡಿಯೂರಪ್ಪ..?

Yadiyurappa--01

ಬೆಂಗಳೂರು, ಮಾ.15 : ಬಿಜೆಪಿ ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಾಳೆ ಬ್ರೇಕಿಂಗ್ ನ್ಯೂಸ್ ಒಂದನ್ನು ನೀಡುವುದಾಗಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ. ನಾಳೆ ಸಂಜೆ 5 ಗಂಟೆಗೆ ಬ್ರೇಕಿಂಗ್ ಸುದ್ದಿಯೊಂದನ್ನು ನೀಡುವುದಾಗಿ ಯಡಿಯೂರಪ್ಪ ಮಾಡಿದ ಟ್ವೀಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸುವುದರೊಂದಿಗೆ ನಾನಾ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಯಾವ ಸುದ್ದಿಯನ್ನು ಯಡಿಯೂರಪ್ಪ ಬ್ರೇಕ್ ಮಾಡ್ತಾರೆ..? ಯಾರಿಗೆ ಸಂಬಂಧಿಸಿದ ಸುದ್ದಿ ..? ರಾಜಕೀಯಕ್ಕೆ ಸಂಬಂಧಿಸಿದ್ದೇ ಅಥವಾ ಅವರ ವೈಯಕ್ತಿಕವಾದದ್ದೇ..? ಅವರು ಕೊಡುವ ಸುದ್ದಿ ಕಾಂಗ್ರೆಸ್ ಗೆ ಶಾಕ್ ಕೊಡುತ್ತಾ ? ಹೀಗೆ ಹತ್ತು ಹಲವಾರು ಪ್ರಶ್ನೆಗಳು ಈಗ ಎಲ್ಲರನ್ನೂ ಕಾಡುತ್ತಿವೆ. ಬಿಎಸ್ವೈ ಅದ್ಯಾವ ಬ್ರೇಕಿಂಗ್ ನ್ಯೂಸ್ ಕೊಡುತ್ತಾರೋ ನಾಳೆ ಸಂಜೆವರೆಗೆ ಕಾದು ನೋಡಬೇಕು. ಅವರು ಕೊಡುವ ಬ್ರೇಕಿಂಗ್ ನ್ಯೂಸ್ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಾ ಅಥವಾ ಠುಸ್ ಆಗುತ್ತಾ ಎಲ್ಲದಕ್ಕೂ ಉತ್ತರ ನಾಳೆ ಸಂಜೆ ಸಿಗಲಿದೆ.

ಈ ನಡುವೆ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ಅವ್ಯವಹಾರ, ಅನೈತಿಕ ಚಟುವಟಿಕೆಗಳ ಕುರಿತು ಮಹತ್ತರ ದಾಖಲೆ, ಸಿಡಿ ಬಿಡುಗಡೆ ಮಾಡಬಹುದು ಎಂಬ ನಿರೀಕ್ಷೆಯಿದೆ. ಕೆಲವರು, ಯಡಿಯೂರಪ್ಪ ಅವರು ಮತ್ತೊಮ್ಮೆ ಕೆಜೆಪಿ ಸೇರುತ್ತಿದ್ದಾರೆ ಎಂದರೆ, ಮತ್ತೆ ಕೆಲವರು ರಾಜಕೀಯ ನಿವೃತ್ತಿ ಘೋಷಿಸಲಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲೇ ಕಾಲೆಳೆಯುತ್ತಿದ್ದಾರೆ. ಒಟ್ಟಿನಲ್ಲಿ ಎಲ್ಲ ಪ್ರಶ್ನೆಗಳಿಗೆ ನಾಳೆ ಸಂಜೆ ವರೆಗೆ ಕಾಯಲೇ ಬೇಕು. ಒಟ್ಟಿನಲ್ಲಿ  ಚುನಾವಣೆಗೆ ಬೇಕಾದ ಎಲ್ಲ ಗಿಮಿಕ್ ಗಳನ್ನೂ ಮಾಡುವಲ್ಲಿ  ಎಲ್ಲಾ  ರಾಜಾಕೀಯ ಪಕ್ಷಗಳು,ನಾಯಕರು  ಬ್ಯುಸಿಯಾಗಿದ್ದಾರೆ.

Sri Raghav

Admin