ನಾಳೆ ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ನಿಶ್ಚಿತಾರ್ಥ

yash

ಬೆಂಗಳೂರು ಆ.11 : ಮೊಗ್ಗಿನ ಮನಸ್ಸು, ಡ್ರಾಮಾ, ಮಿಸ್ಟರ್ ಆ್ಯಂಡ್ ಮಿಸೆಸ್ ರಾಮಚಾರಿ ಮೊದಲಾದ ಚಿತ್ರದಲ್ಲಿ  ಪ್ರೇಕ್ಷಕರ ಮನಸೂರೆಗೊಂಡ ‘ಸಕ್ಸಸ್ ಜೋಡಿ’  ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಇದೇ ಶುಕ್ರವಾರ ಅಂದರೇ ವರಮಹಾಲಕ್ಷ್ಮಿ ಹಬ್ಬದ ದಿನ ಬೆಳಗ್ಗೆ 10 ಗಂಟೆಗೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ಖಾಸಗಿ ಸಮಾರಂಭದಲ್ಲಿ ನಡೆಯುವ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಕುಟುಂಬಸ್ಥರು ಮತ್ತು ಕೆಲವೇ ಆಪ್ತರು ಪಾಲ್ಗೊಳ್ಳಲಿದ್ದಾರೆ.   ಕಳೆದ 5 ವರ್ಷಗಳಿಂದ ಯಶ್ ಮತ್ತು ರಾಧಿಕಾ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಲೇ ಇತ್ತು. ಇದರ ಬಗ್ಗೆ ಮಾತನಾಡಿರಲಿಲ್ಲ. ಆದ್ರೆ ಎರಡೂ ಕುಟುಂಬಗಳ ಒಪ್ಪಿಗೆಯ ಮೇರೆಗೆ ಶುಕ್ರವಾರ ಗೋವಾದಲ್ಲಿರುವ ರಾಧಿಕಾ ಅಜ್ಜಿಯ ಮನೆಯಲ್ಲಿ ನಿಶ್ಚಿತಾರ್ಥ ನೆರವೇರಲಿದೆ. ಡಿಸೆಂಬರ್ನಲ್ಲಿ ಮದುವೆಯಾಗಲಿದ್ದಾರೆ ಎನ್ನಲಾಗಿದೆ.
ಆದರೆ ನಿಶ್ಚಿತಾರ್ಥ ಸುದ್ದಿಯನ್ನು ಯಶ್ ಮತ್ತು ರಾಧಿಕಾ ಇನ್ನೂ ಖಚಿತಪಡಿಸಿಲ್ಲ. ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನಂದಗೋಕುಲ ಎನ್ನುವ ಧಾರಾವಾಹಿಯಲ್ಲಿ ಇವರಿಬ್ಬರೂ ತಮ್ಮ ಕರಿಯರ್ ಶುರು ಮಾಡಿದ್ರು. ನಂತರ ಮೊಗ್ಗಿನ ಮನಸ್ಸು ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ರು. ಆಮೇಲೆ ಇಬ್ಬರೂ ಅನೇಕ ಯಶಸ್ವಿ ಚಿತ್ರಗಳ ಮೂಲಕ ಸ್ಯಾಂಡಲ್ವುಡ್ನಲ್ಲಿ ನೆಲೆಯೂರಿದ್ರು. ವರ್ಷಾಂತ್ಯದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

► Follow us on –  Facebook / Twitter  / Google+

Sri Raghav

Admin