ನಿಖರ ಗುರಿ ತಲುಪಬಲ್ಲ ಪಿನಾಕಾ ರಾಕೆಟ್ 2 ನೇ ಬಾರಿ ಯಶಸ್ವಿ ಉಡಾವಣೆ
ನವದೆಹಲಿ, ಜ.25– ನಿಖರ ಗುರಿ ತಲುಪುವ ಸಾಮಥ್ರ್ಯದ ಗೈಡೆಡ್ ಪಿನಾಕ ರಾಕೆಟ್ ಉಡಾವಣಾ ಪರೀಕ್ಷೆಯಲ್ಲಿ ಎರಡನೆ ಬಾರಿ ಭಾರತ ಯಶಸ್ವಿಯಾಗಿದ್ದು, ರಕ್ಷಣಾ ಕ್ಷೇತ್ರದಲ್ಲಿ ಮಹತ್ವದ ಇನ್ನೊಂದು ಮೈಲಿಗಲ್ಲು ಸ್ಥಾಪಿಸಿದೆ. ಒಡಿಶಾದ ಚಂಡಿಪುನರ್ ಸಮಗ್ರ ಪರೀಕ್ಷಾ ವಲಯ-ಐಟಿಆರ್ನಿಂದ ಪಿನಾಕ ರಾಕೆಟ್ ಹೊಸ ನಮೂನೆ ಉಡಾವಣೆ ಹಾರಾಟ ಪರೀಕ್ಷೆಯನ್ನು ಎರಡನೆ ಬಾರಿ ಯಶಸ್ವಿಯಾಗಿ ನಡೆಸಲಾಯಿತು. ಈ ಸಾಧನೆಗಾಗಿ ವಿಜ್ಞಾಗಳು, ಉದ್ಯಮ ಮತ್ತು ಸಶಸ್ತ್ರ ಪಡೆಗಳನ್ನು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹಾಗೂ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆಡಿರ್ಒ) ಅಧ್ಯಕ್ಷ ಎಸ್.ಕ್ರಿಸ್ಟೋಫರ್ ಅಭಿನಂದಿಸಿದ್ದಾರೆ.
ವಾಯುಮಾರ್ಗ, ಮಾರ್ಗದರ್ಶನ ಮತ್ತು ನಿಯಂತ್ರಣ ಕಿಟ್ಗಳೊಂದಿಗೆ ಸಜ್ಜಾಗಿರುವ ಗೈಡೆಡ್ ಪಿನಾಕ ರಾಕೆಟ್ ಮಾರ್ಪಡಿತ ನಮೂನೆಯಾಗಿದೆ. ಇದು ನಿಖರ ಗುರಿ ತಲುಪಲು ಸಮರ್ಥವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >