ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಸೂಚನೆ

9
ಹೂವಿನಹಡಗಲಿ,ಸೆ.30- ಹೂವಿನಹಡಗಲಿ ವಿಧಾನಸಭಾ ಕ್ಷೇತ್ರದ ಅಭಿವೃದ್ದಿಗೆ ಪೂರಕವಾದ ಮಹತ್ವ ಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ 12 ಕೆರೆಗೆ ನೀರು ತುಂಬಿಸುವ ಯೋಜನೆಗೆ ಕಾಮಗಾರಿ ಯೋಜನೆಗೆ ಚಾಕವೆಲ್ ಕಾಮಗಾರಿ ಯನ್ನು ಜನವರಿ ಅಂತ್ಯದ ಒಳಗೆಪೂರ್ಣಗೊಳಿಸುವಂತೆ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಶಾಸಕ ಪಿ.ಟಿ. ಪರಮೇಶ್ವರನಾಯ್ಕ ಸೂಚನೆ ನೀಡಿದರು.
ಮಾಗಳ ಹಾಗೂ ಶಾಕಾರದ ಹತ್ತಿರ ತುಂಗಭದ್ರಾನದಿ ದಡದಲ್ಲಿ ನಿರ್ಮಾಣಗೊಂಡ 12 ಕೆರೆಗಳ ನೀರುತುಂಬಿಸುವ ಯೋಜನೆಯ ಚಾಕವಾಲ್ ಕಾಮಗಾರಿಯನ್ನು ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮೈಲಾರದ ಪ್ರವಾಸಿಮಂದಿರದಲ್ಲಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಶಾಸಕ ಪಿ.ಟಿ. ಪರಮೇಶ್ವರನಾಯ್ಕ, ಈ ವರ್ಷ ಬರಗಾಲ ಆವರಿಸಿದ್ದು, ರೈತಾಪಿವರ್ಗ ಅತ್ಯಂತ ಸಂಕಷ್ಟದಲ್ಲಿ ಇರುವುದರಿಂದ ಕೆರೆಗೆ ನೀರುತುಂಬಿಸುವ ಯೋಜನೆ ರೈತರಿಗೆ ಅನುಕೂಲವಾಗಲಿದ್ದು, ಜನವರಿ ತಿಂಗಳಲ್ಲಿ ಪ್ರಾಯೋಗಿಕವಾಗಿ ನೀರು ಬಿಡಲಾಗುವುದು ಎಂದು ಹೇಳಿದರು. ಅಧಿಕಾರಿಗಳು ಮತ್ತು ಗುತ್ತಿಗೆದಾರರಲ್ಲಿ ವಿನಂತಿಸಿಕೊಂಡ ಶಾಸಕರು, ಜನರ ಪರವಾಗಿ ನಿಮ್ಮನ್ನು ಕೈಮುಗಿದು ಕೇಳುತ್ತೇನೆ.

 

 

ನಿಗಧಿತ ಅವಧಿಯೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಮತ್ತು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯವಹಿಸದೇ ಕಾರ್ಯನಿರ್ವಹಿಸಬೇಕಾಗುತ್ತದೆ. ಏನಾದರೂ ಸಮಸ್ಯೆಗಳಿದ್ದಲ್ಲಿ ಚರ್ಚಿಸಿ, ಸರ್ಕಾರದ ಮಟ್ಟದಲ್ಲಾಗುವ ಕೆಲಸಕ್ಕೆ ಮೇಲಾಧಿಕಾರಿಗಳು ಮತ್ತು ಸಂಬಂಧಪಟ್ಟ ಸಚಿವರಿಂದ ಸಮಸ್ಯೆ ಪರಿಹಾರಕ್ಕೆ ಸಲಹೆ ಕಂಡುಕೊಳ್ಳೋಣ ಮತ್ತು ರೈತರಲ್ಲಿ ವಿನಂತಿಸಿಕೊಂಡು, ಕಾಮಗಾರಿ ವಿಳಂಭಗೊಳ್ಳದಂತೆ ಪೂರ್ಣಗೊಳಿಸುವಂತೆ ಹೇಳಿದರು. ಮಾಗಳ ಚಾಕವೆಲ್ ವ್ಯಾಪ್ತಿಯಲ್ಲಿ ಅರಳಿಹಳ್ಳಿ, ಹಗರನೂರು, ಹಿರೇ ಹಡಗಲಿ, ಬನ್ನಿಕಲ್ಲು, ನಾಗತಿಬಸಾಪುರ ಸೇರಿದಂತೆ 12 ಕೆರೆಗಳ ಕಾಮಗಾರಿ ಮುಗಿಸಲು ಜನವರಿ ಅಂತ್ಯದ ಗಡುವಿಗೆ ಒಪ್ಪಿಕೊಂಡ ಅಧಿಕಾರಿಗಳು ಮತ್ತು ಗುತ್ತಿಗೆದಾರರು, ಜೆಸ್ಕಾಂ ಇಲಾಖೆಯ ವಿದ್ಯುತ್ ಸರಬರಾಜಿಗಾಗಿ ಕ್ರಿಯಾಯೋಜನೆಯನ್ನು ಸಿದ್ದಗೊಳಿಸಬೇಕಾಗಿದೆ ಎಂದರು. ಬಳ್ಳಾರಿಯ ಎಸ್.ಇ. ಮಾತನಾಡಿ ಅಕ್ಟೋಬರ್ ಒಳಗಡೆ ಕ್ರಿಯಾ ಯೋಜನೆಯನ್ನು ಸಿದ್ದಗೊಳಿಸುವುದಾಗಿ ಹೇಳಿದರು.
ಎಸ್.ಎಲ್.ಓ. ಹುದ್ದೆ ಖಾಲಿ ಇರುವುದರಿಂದ ಭೂಸ್ವಾಧೀನ ಮಾಡಿಕೊಂಡ ರೈತರಿಗೆ ಸರಿಯಾದ ಸಮಯಕ್ಕೆ ಪರಿಹಾರ ನೀಡುವುದು ವಿಳಂಭವಾಗುತ್ತಿದೆ ಎಂದು ಸಿಂಗಟಾಲೂರು ಏತ ನೀರಾವರಿ ಯೋಜನೆಯ ಕಾರ್ಯಪಾಲಕ ಅಭಿಯಂತರ ರಾಥೋಡ್ ಶಾಸಕರ ಗಮನ ಸೆಳೆದಾಗ, ಮುಂಡರಗಿಯ ಎಸ್.ಎಲ್.ಓ.ರವರೇ ಈ ಭಾಗದಲ್ಲಿಯೂ ಕೂಡಾ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದ್ದು, ಅವರನ್ನು ಸಂಪರ್ಕಿಸಿ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಕಾರ್ಯನಿರ್ವಹಿಸಿರಿ ಎಂದು ಶಾಸಕರು ಹೇಳಿದರು. ಅಕ್ಟೋಬರ್ 15ರ ಒಳಗೆ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಆರೋಗ್ಯ ಸಚಿವ ರಮೇಶಕುಮಾರ್‍ರವರನ್ನು ಕ್ಷೇತ್ರಕ್ಕೆ ಕರೆಸುವುದರ ಮೂಲಕ ಮೈಲಾರದ ಮೇಲ್ದರ್ಜೆಗೇರಿದ 110 ಕೆ.ವಿ. ಸಾಮಥ್ರ್ಯದ 12 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ವಿದ್ಯುತ್ ವಿತರಣಾ ಕೇಂದ್ರ ಹಾಗೂ ನೂತನವಾಗಿ ನಿರ್ಮಾಣಗೊಂಡ ಮೈಲಾರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಉದ್ಘಾಟನೆಯನ್ನು ನೆರವೇರಿಸಲಾಗುವುದು ಎಂದು ಶಾಸಕರು ತಿಳಿಸಿದರು.

 

► Follow us on –  Facebook / Twitter  / Google+

Sri Raghav

Admin