ನಿಮ್ಮ ವಿರುದ್ಧ ಎಫ್‍ಐಆರ್ ದಾಖಲಿಸುತ್ತೇನೆ.. ನನಗೆ ಆಶೀರ್ವಾದ ಮಾಡಿ..!

Kejriwal-vs-Kapil-Mishra

ನವದೆಹಲಿ, ಮೇ 9-ನಿಮ್ಮ ವಿರುದ್ಧ ಸಿಬಿಐನಲ್ಲಿ ಮೂರು ಎಫ್‍ಐಆರ್‍ಗಳನ್ನು ದಾಖಲಿಸುತ್ತೇನೆ. ನನಗೆ ಆಶೀರ್ವಾದ ಮಾಡಿ.. ಹೀಗೆ ತಮ್ಮ ಮಾಜಿ ಗುರು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ವಜಾಗೊಂಡ ಸಚಿವ ಕಪಿಲ್ ಮಿಶ್ರಾ ಅವರು ಬಹಿರಂಗ ಪತ್ರದಲ್ಲಿ ಕೋರಿದ್ದಾರೆ.   ಅರವಿಂದ್ ಕೇಜ್ರಿವಾಲ್ ವಿರುದ್ಧ ಲಂಚ ಆರೋಪಗಳನ್ನು ಮಾಡಿ ಎಲ್ಲರ ಗಮನ ಸೆಳೆದಿರುವ ಕರ್ವಾಲ್ ನಗರದ ಶಾಸಕ ಕಪಿಲ್‍ರನ್ನು ನಿನ್ನೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟನೆ ಮಾಡಲಾಗಿತ್ತು. 

ಎಎಪಿ ಮುಖ್ಯಸ್ಥರೂ ಆದ ಕೇಜ್ರಿವಾಲ್ ಅವರಿಗೆ ಪತ್ರ ಬರೆದಿರುವ ಅವರು, ನಿಮಗೆ ತಾಕತ್ತಿದ್ದರೆ ನನ್ನ ವಿರುದ್ಧ ಚುನಾವಣೆಯನ್ನು ಎದುರಿಸಿ. ನೀವು ಹೇಳಿದ ಕ್ಷೇತ್ರದಲ್ಲಿ ನಾನು ನಿಮ್ಮ ವಿರುದ್ಧ ಸ್ಪರ್ಧಿಸಿ ಗೆಲ್ಲುವೆ ಎಂದೂ ಕಪಿಲ್ ಪಂಥಾಹ್ವಾನ ನೀಡಿದ್ದಾರೆ.   ಅರವಿಂದ್ ಕೇಜ್ರಿವಾಲ್ ವಿರುದ್ಧ ನಾನು ನನ್ನ ಜೀವನದಲ್ಲಿ ದೊಡ್ಡ ಹೋರಾಟಕ್ಕೆ ಸಜ್ಜಾಗುತ್ತಿದ್ದೇನೆ. ಅದಕ್ಕೂ ಮುನ್ನ ನನ್ನ ಗೆಲುವಿಗಾಗಿ ಆಶೀರ್ವದಿಸಿ ಎಂದು ರಾಜಕೀಯ ಅಖಾಡದಲ್ಲಿ ತಮಗೆ ಪಟ್ಟುಗಳನ್ನು ಹೇಳಿಕೊಟ್ಟಿರುವ ದೆಹಲಿ ಮುಖ್ಯಮಂತ್ರಿಗೇ ತೊಡೆ ತಟ್ಟಿ ಸವಾಲು ಹಾಕಿದ್ದಾರೆ ಕಪಿಲ್ ಮಿಶ್ರಾ.

ತಮ್ಮ ಸಂಬಂಧಿಗಾಗಿ 50 ಕೋಟಿ ರೂ.ಗಳ ಭೂ ವ್ಯವಹಾರ, ಆರೋಗ್ಯ ಸಚಿವ ಸತ್ಯೇಂದ್ರ ಜೈನ್‍ನಿಂದ 2 ಕೋಟಿ ರೂ. ಲಂಚ ಪ್ರಕರಣ ಹಾಗೂ 400 ಕೋಟಿ ರೂ.ಗಳ ವಾಟರ್ ಟ್ಯಾಂಕರ್ ಹಗರಣಗಳ ಸಂಬಂಧ ಕೇಜ್ರಿವಾಲ್ ವಿರುದ್ಧ ಕಪಿಲ್ ಎಫ್‍ಐಆರ್ ದಾಖಲಿಸಲಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin