ನಿಯಮ ಉಲ್ಲಂಘಸಿದರೆ ಪರವಾನಿಗೆ ರದ್ದು : ರವಿಶಂಕರ್

 

ಗೌರಿಬಿದನೂರು, ಅ.21- ಅಕ್ರಮವಾಗಿ ಮದ್ಯ ಮಾರಾಟ ಮಾಡುವುದು, ಅಭಕಾರಿ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಬಾರ್ ಅಥವಾ ವೈನ್ಸ್ ಸ್ಟೋರ್ ಗಳ ವಿರುದ್ದ ಕ್ರಮ ಜರುಗಿಸುವುದಾಗಿ ರಾಜ್ಯ ವಿಚಕ್ಷಣಾದಳದ ಅಭಕಾರಿ ನಿರೀಕ್ಷಕ ರವಿಶಂಕರ್ ಖಡಕ್ ಎಚ್ಚರಿಕೆ ನೀಡಿದರು.
ಪಟ್ಟಣದ ಬಿ.ಹೆಚ್.ರಸ್ತೆಯ ಬಳಿ ಕದಂಬ ಬಾರ್ ದಾಸ್ತಾನು ಪರಿಶೀಲನೆಗೆ ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ತಿಂಗಳಿಗೆ ಎರಡು ಬಾರಿ ಮದ್ಯದ ಅಂಗಡಿಗಳಿಗೆ ದಿಢೀರ್ ಬೇಟಿ  ನೀಡಿ, ಪರಿಶೀಲನೆ ನಡೆಸಲಾಗುತ್ತಿದ್ದು, ಯಾವುದೇ ರೀತಿಯ ನಿಯಮ ಉಲ್ಲಂಘನೆ ಕಂಡು ಬಂದಲ್ಲಿ ಕ್ರಮವನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ತಾಲೂಕಿನ ಗ್ರಾಮಗಳಲ್ಲಿ ಪೆಟ್ಟಿಗೆ ಅಂಗಡಿಗಳಲ್ಲೂ ಸಹ ರಾಜಾರೋಷವಾಗಿ ಮದ್ಯ  ಮಾರಾಟವಾಗುತ್ತಿದ್ದು, ಇದರಿಂದ ಗ್ರಾಮಗಳಲ್ಲಿ ಪ್ರತಿನಿತ್ಯ ಒಂದಲ್ಲಾ ಒಂದು ರೀತಿಯ ಗಲಾಟೆ, ಹೊಡೆದಾಟಗಳು ನಿರಂತರವಾಗಿ ನಡೆಯುತ್ತಲೆ ಇದೆ. ಇದರ ಜತೆಗೆ ಯಾವುದೇ ಮದ್ಯದಂಗಡಿಗಳು ಬೆಳಗಿನ ಜಾವದಿಂದಲೇ ವಹಿವಾಟು ನಡೆಸುತ್ತಾರೆ. ಇಲ್ಲಿ ಬಾರ್ ಮತ್ತು ವೈನ್ಸ್ ಸ್ಟೋರ್‍ಗಳವರು ಅಬಕಾರಿ ನೀತಿ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ರವಿಶಂಕರ್, ಈ ಬಗ್ಗೆ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿಕೊಂಡು ಕೂಡಲೇ ಕ್ರಮಕ್ಕೆ ಮುಂದಾಗುವುದರ ಜತೆಗೆ, ಮಪ್ತಿಯಲ್ಲಿ ಗ್ರಾಮಗಳಲ್ಲಿ ಭೇಟಿ ನೀಡಿ ಅಕ್ರಮ  ಮದ್ಯ    ಮಾರಾಟಕ್ಕೆ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಆಗ್ರಹ:
ತಾಲೂಕಿನ ಅಬಕಾರಿ ಇಲಾಖೆ ದಿವ್ಯ ನಿರ್ಲಕ್ಷತೆಯಿಂದಲೇ ತಾಲೂಕಿನಲ್ಲಿ ಅಕ್ರಮ  ಮದ್ಯ    ಮಾರಾಟ ಹಾಗೂ ಅಬಕಾರಿ ನಿಯಮಗ ಉಲ್ಲಂಘನೆ ಗಾಳಿಗೆ ತೂರಿದ್ದಾರೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ನಿಯಮ ಪಾಲನೆ:
ಬಾರ್ ಮತ್ತು ವೈನ್ಸ್ ಸ್ಟೋರ್‍ಗಳವರು ಅಬಕಾರಿ ನಿಯಮಗಳನ್ನು ತಪ್ಪದೆ ಪಾಲಿಸಬೇಕು. ಇಲ್ಲವಾದಲ್ಲಿ ಅಂತಹವರ ಪರವಾನಿಗೆಯನ್ನು ರದ್ದು ಪಡಿಸಲಾಗುವುದು ಎಂದು ಅಬಕಾರಿ ನಿರೀಕ್ಷಕ ರವಿಶಂಕರ್ ಎಚ್ಚರಿಸಿದರು.

 

 

► Follow us on –  Facebook / Twitter  / Google+

Sri Raghav

Admin