ನಿರಂತರ 5ನೇ ದಿನವೂ ಕುಸಿತ ಕಂಡ ಸೆನ್ಸೆಕ್ಸ್ :156.13 ಅಂಕ ಕುಸಿತ

Sensex-001

ಮುಂಬಯಿ ನ.04 : ನಿರಂತರ ಐದನೇ ದಿನವೂ ಕುಸಿತ ಕಂಡಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಇಂದು ಶುಕ್ರವಾರದ ವಹಿವಾಟನ್ನು 156.13 ಅಂಕಗಳ ನಷ್ಟದೊಂದಿಗೆ 27,274.15 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ. ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಪರಿಣಾಮ ಹಿನ್ನೆಲೆಯಲ್ಲಿ ಸೆನ್ಸೆಕ್ಸ್ ಮತ್ತು ನಿಪ್ಟಿ ಕಳೆದ ನಾಲ್ಕು ತಿಂಗಳಲ್ಲಿಯೇ ಅತಿ ಕೆಳ ಮಟ್ಟಕ್ಕೆ ಕುಸಿದಿದೆ. ಬಿಎಸ್‌ಇ ಸೂಚ್ಯಂಕ 8,433.75 ಅಂಶಗಳೊಂದಿಗೆ 51.2 ಅಂಕಗಳ ಕುಸಿತದೊಂದಿಗೆ ದಿನದ ವಹಿವಾಟು ಮುಗಿಸಿದೆ. ಬಿಎಸ್‌ಇ ಸೂಚ್ಯಂಕ 27,274.15 ಅಂಶಗಳೊಂದಿಗೆ 156.13 ಅಂಕ ಕುಸಿತ ಕಂಡಿದೆ.

ಐಟಿಸಿ(+3.64%), ಎಂ&ಎಂ(+1.02%), ವಿಪ್ರೊ (+0.91%), ಎಚ್ ಯುಎಲ್(+0.91%) ಮತ್ತು ಒಎನ್ ಜಿಸಿ(+ 0.78%) ಈ ಐದು ಕಂಪನಿಗಳು ಅಗ್ರ ಸೆನ್ಸೆಕ್ಸ್ ಲಾಭದಾರರಾಗಿದ್ದು, ಸನ್ ಫಾರ್ಮಾ (-7.41%), ಡಾ ರೆಡ್ಡೀಸ್(-5.67%), ಲುಪಿನ್(-3.57%), ಕೋಲ್ ಇಂಡಿಯಾ (-3.44%) ಮತ್ತು ಹೀರೊ ಮೊಟೊಕಾರ್ಪ್ (-2.86%)ನಷ್ಟವನ್ನು ಅನುಭವಿಸಿವೆ. ಇಂದಿನ ವಹಿವಾಟಿನಲ್ಲಿ 2,205 ಶೇರುಗಳು ಮುನ್ನಡೆ ಸಾಧಿಸಿದರೆ 696 ಶೇರುಗಳು ಹಿನ್ನಡೆಗೆ ಗುರಿಯಾದವು. 119 ಶೇರುಗಳು ಇದ್ದಲ್ಲೇ ಉಳಿದವು.

► Follow us on –  Facebook / Twitter  / Google+

Sri Raghav

Admin