ನೀರಿನ ಟ್ಯಾಂಕ್ ಏರಿದ ಮಾನಸಿಕ ಅಸ್ವಸ್ಥ, ಪೊಲೀಸರು ಕಂಗಾಲು..!

Spread the love

Water-tank

ಮಳವಳ್ಳಿ, ಮೇ 13– ನೀರಿನ ಟ್ಯಾಂಕ್ ಮೇಲೇರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆಯೊಡ್ಡಿದ ಮಾನಸಿಕ ಅಸ್ವಸ್ಥನೊಬ್ಬನನ್ನು ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿಯವರು ರಕ್ಷಿಸಿದ್ದಾರೆ. ತಾಲೂಕಿನ ಅಂಕನಹಳ್ಳಿ ಗ್ರಾಮದಲ್ಲಿ ಇಂದು ಬೆಳಗ್ಗೆ ನಡೆದಿದೆ. ಅಂಚೆದೊಡ್ಡಿ ಗ್ರಾಮದ ನಿವಾಸಿ ಪ್ರಸನ್ನ (27) ಇಂದು ಬೆಳಗ್ಗೆ ಅಂಕನಹಳ್ಳಿ ಗ್ರಾಮದಲ್ಲಿರುವ ನೀರಿನ ಟ್ಯಾಂಕ್ ಮೇಲೆ ಹತ್ತಿದ್ದಾನೆ. ಇದನ್ನು ಕಂಡ ಗ್ರಾಮಸ್ಥರು ಕೂಡಲೇ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕಾಗಮಿಸಿದ ಮಳವಳ್ಳಿ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಪ್ರಸನ್ನನನ್ನು ಕೆಳಗಿಳಿಯುವಂತೆ ಕೇಳಿಕೊಂಡಿದ್ದಾರೆ.ಇದಕ್ಕೆ ಒಪ್ಪದ ಪ್ರಸನ್ನ ಸ್ಥಳಕ್ಕೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬರಬೇಕು, ಮದ್ಯ ಮತ್ತು ಸಿಗರೇಟ್ ಬೇಕೆಂದು ಹಠ ಹಿಡಿದಿದ್ದಾನೆ. ನೀನು ಕೇಳಿದ್ದನ್ನೆಲ್ಲ ಕೊಡಿಸುತ್ತೇನೆ ಎಂದು ಹೇಳಿದಾಗ ಪ್ರಸನ್ನ ಟ್ಯಾಂಕ್‍ನಿಂದ ಕೆಳಗೆ ಇಳಿದಿದ್ದಾನೆ. ಕೂಡಲೇ ಪ್ರಸನ್ನನಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin