ನೀರು, ಆಹಾರ ಸಿಗದೆ ಹೆಣ್ಣು ಕರಡಿ ಸಾವು
ಹಿರಿಯೂರು, ಡಿ.20- ನೀರು, ಆಹಾರ ಸಿಗದೆ ಕರಡಿಯೊಂದು ಮೃತಪಟ್ಟಿರುವ ಘಟನೆ ತಾಲೂಕಿನ ದಿಂಡಾವರ ಗ್ರಾಮದ ಸಮೀಪದ ದೊಡ್ಡ ಕಟ್ಟೆ ಹತ್ತಿರ ನಡೆದಿದೆ. ಸುಮಾರು 9 ವರ್ಷದ ಕರಡಿ ಆಹಾರ ಹುಡುಕಿ ಅರಣ್ಯಕ್ಕೆ ಬಂದಿದ್ದು, ಆಹಾರ ಸಿಗದೆ ತೀವ್ರ ಅಸ್ವಸ್ಥವಾಗಿ ಮೃತಪಟ್ಟಿದೆ ಎಂದು ಸಹಾಯ ಅರಣ್ಯಾಧಿಕಾರಿ ಶ್ರೀನಿವಾಸ್ ನಾಯಕ್ ತಿಳಿಸಿದ್ದಾರೆ. ಪಶು ನಿರೀಕ್ಷಕ ವಸಂತ್ಕುಮಾರ್ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಸಾವನ್ನಪ್ಪಿದ ಜಾಗದಲ್ಲಿಯೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ವಲಯ ಅರಣ್ಯಾಧಿಕಾರಿ ನಾಗೇಂದ್ರನಾಯ್ಕ, ಅರಣ್ಯಾಧಿಕಾರಿ ಡಿ.ಎಸ್. ನಾಯ್ಕ್ ಹಾಗೂ ಸುತ್ತಮುತ್ತಲ ಹಳ್ಳಿಗಳ ಜನ ಉಪಸ್ಥಿತರಿದ್ದರು.