ನೀರು ಹರಿಸುವಲ್ಲಿ ತಾರತಮ್ಯ : ಆರೋಪ

turuvekere

ತುರುವೇಕೆರೆ, ಸೆ.20- ತಾಲ್ಲೋಕಿನ ಕೆರೆಗಳಿಗೆ ನೀರು ಹರಿಸದೇ ಇತರೆ ತಾಲ್ಲೋಕಿನ ಕೆರೆಗಳಿಗೆ ನೀರು ಹರಿಸುತ್ತಾ ಹೇಮಾವತಿ ಇಲಾಖಾ ಅಧಿಕಾರಿಗಳು ತಾರತಮ್ಯವೆಸಗುತ್ತಿದ್ದಾರೆ ಎಂದು ತಾಲ್ಲೋಕು ಪಂಚಾಯತಿ ಮಾಜಿ ಅಧ್ಯಕ್ಷ ಎಂ.ಡಿ. ರಮೇಶ್‍ಗೌಡ ಆರೋಪಿಸಿದರು. ಪಟ್ಟಣದ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕುಡಿಯುವ ನೀರಿನ ನೆಪವೊಡ್ಡಿ ತಾಲ್ಲೋಕಿನ ರೈತರಿಗೆ ನೀರು ಹರಿಸುವ ವಿಚಾರದಲ್ಲಿ ವಂಚಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಕಛೇರಿಗೆ ರೈತರುಗಳೊಂದಿಗೆ ಮುತ್ತಿಗೆ ಹಾಕಿದ ಸಂದರ್ಭದಲ್ಲಿ ನೀರು ಬಿಡುವ ಭರವಸೆ ನೀಡಿ ಕಳುಹಿಸಿ ನಂತರ ರಾಗ ಬದಲಿಸಿದ್ದಾರೆ ಎಂದರು.
ತಾಲ್ಲೋಕಿಗೆ ಸಂಬಂಧಿಸಿದ ಹೇಮಾವತಿ ನಾಲೆಯಿಂದ 1160 ಕ್ಯೂಸೆಕ್ ನೀರು ಹರಿಯುತ್ತಿದೆ ಎಂದು ತಿಳಿಸುತ್ತಾರೆ.
ಆದರೆ 62 ನೇ ಕಿ.ಮೀಟರ್‍ನಲ್ಲಿ ಕೇವಲ 150 ಕ್ಯೂಸೆಕ್ ನೀರು ಹರಿಯುತ್ತಿದ್ದು, ಪೋ ಲಾಗುತ್ತಿರುವ ನೀರನ್ನು ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಕೂಡಲೇ ತಾಲ್ಲೋಕಿನ ಕೆರೆಗಳಿಗೆ ಹರಿಸಬೇಕು ಎಂದು ಆಗ್ರಹಿಸಿದರು.ಮುಖ್ಯನಾಲೆ ಮತ್ತು ವಿತರಣಾ ನೆಲೆಗಳ ಮುಖಾಂತರ ಜನಜಾನುವಾರುಗಳಿಗೆ ಅವಶ್ಯಕವಿರುವ ಕುಡಿಯುವ ನೀರನ್ನು ಶೀಘ್ರವೇ ಹರಿಸಿ ರೈತರ ಹಿತ ಕಾಪಾಡಬೇಕು. ಇಲ್ಲದಿದ್ದಲ್ಲಿ ರೈತರ ಜೊತೆ ಚರ್ಚಿಸಿ ಬೃಹತ್ ಮೆರವಣಿಗೆಯೊಂದಿಗೆ ಹೇಮಾವತಿ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.

 

► Follow us on –  Facebook / Twitter  / Google+

 

Sri Raghav

Admin