ನೂತನ ನಾಯಕ ವಿರಾಟ್ ಕೊಹ್ಲಿಗೆ ಹೊಸ ಅಗ್ನಿಪರೀಕ್ಷೆ

Spread the love

Virat-Kohli

ಪುಣೆ,ಜ.14-ನೂತನ ನಾಯಕ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ನಾಳೆ ಪುಣೆಯಲ್ಲಿ ಇಂಗ್ಲೆಂಡ್ ವಿರುದ್ದ ಸೆಣಸಲಿದ್ದು, ಇದರೊಂದಿಗೆ ನಾಯಕ ಕೊಹ್ಲಿಗೆ ಅಗ್ನಿ ಪರೀಕ್ಷೆ ಎದುರಾಗಲಿದೆ.
ಪ್ರಸಕ್ತ ಸಾಲಿನ ಮೂರು ಪಂದ್ಯಗಳ ಏಕದಿನ ಸರಣಿಯ ಭಾರತ-ಇಂಗ್ಲೆಡ್ ನಡುವಿನ ಮೊದಲ ಕ್ರಿಕೆಟ್ ಪಂದ್ಯ ನಾಳೆ ಆರಂಭವಾಗಲಿದೆ. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ರಾಜೀನಾಮೆ ನೀಡಿದ ಬಳಿಕ ನೂತನ ನಾಯಕ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಸೆಣಸಲಿದೆ.  ನಾಯಕತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಇದೇ ಮೊದಲ ಬಾರಿಗೆ ಕ್ಯಾಪ್ಟನ್ ಕೂಲ್ ಧೋನಿ ಸಾಮಾನ್ಯ ಆಟಗಾರರಾಗಿ ಕಣಕ್ಕಿಳಿಯಲಿದ್ದಾರೆ. ಒಬ್ಬ ಶ್ರೇಷ್ಠ ನಾಯಕತ್ವ ಹೊಂದಿದ್ದ ಮಾಜಿ ನಾಯಕ ಮಾಹಿ ತಂಡದಲ್ಲಿರುವುದರಿಂದ ಕೊಹ್ಲಿ ತಂಡವನ್ನು ಹೇಗೆ ಮುನ್ನಡೆಸಲಿದ್ದಾರೆ ಎಂಬುದನ್ನು ಕ್ರಿಕೆಟ್ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ತವರು ನೆಲದಲ್ಲೇ ನಡೆದ ಪ್ರವಾಸಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ನಾಯಕತ್ವದ ಭಾರತ ತಂಡ ಅದ್ಭುತ ಪ್ರದರ್ಶನ ತೋರಿ 4-0 ಅಂತರದಲ್ಲಿ ಸರಣಿ ಗೆದ್ದಿತ್ತು.

ಗೆಲುವಿನ ಅಲೆಯಲ್ಲಿರುವ ಭಾರತ ಆಟಗಾರರು ಅದೇ ಪ್ರದರ್ಶನವನ್ನು ನಾಳೆ ಪುಣೆಯಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯದಲ್ಲಿ ಮುಂದುವರೆಸಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕು.
ನಾಳೆ ನಡೆಯಲಿರುವ ಪಂದ್ಯದಲ್ಲಿ ಆಡಲು ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್, ಅಗ್ರೆಸ್ಸೀವ್ ಬ್ಯಾಟ್ಸ್‍ಮ್ಯಾನ್ ಸುರೇಶ್ ರೈನಾ, ಯುವ ಆಟಗಾರ ರಿಶಿಬ್ ಪಂತ್ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಬೌಲಿಂಗ್‍ನಲ್ಲಿ ಮುಂಚೂಣಿ ಸ್ಪಿನ್ನರ್‍ಗಳಾದ ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ ನಾಳಿನ ಪಂದ್ಯಕ್ಕೆ ಮತ್ತಷ್ಟು ಬಲ ತುಂಬಿದ್ದು, ಬ್ಯಾಂಟಿಂಗ್‍ನಲ್ಲಿ ಆರಂಭಿಕ ಆಟಗಾರರಾಗಿ ಶಿಖರ್ ಧವನ್ ಹಾಗೂ ಅಜಿಂಕ್ಯ ರಹಾನೆ ಕಣಕ್ಕಿಳಿಯಲಿದ್ದಾರೆ. ಆದರೆ ಬಿಗ್ ಹಿಟ್ಟರ್ ರೋಹಿತ್ ಶರ್ಮ ಅವರ ಅನುಪಸ್ಥಿತಿ ಕಾಡಲಿದೆ.

ಇತ್ತ ಸರಣಿ ಸೋಲು ಕಂಡಿರುವ ಆಂಗ್ಲರು ಏಕದಿನ ಸರಣಿಯಲ್ಲಿ ಉತ್ತಮ ಆಟವಾಡಿದ್ದು, ಭಾರತಕ್ಕೆ ತಿರುಗೇಟು ನೀಡಲು ಸನ್ನದ್ದರಾಗಿದ್ದಾರೆ.  ಕೊಹ್ಲಿ ಸುದ್ದಿಗೋಷ್ಠಿ: ತಂಡದ ಎಲ್ಲ ಆಟಗಾರರು ಫಿಟ್ ಅಂಡ್ ಫೈನ್ ಆಗಿದ್ದು, ಸಮರ್ಥವಾಗಿ ಆಡುವ ಹುಮ್ಮಸ್ಸಿನಲ್ಲಿದ್ದಾರೆ. ಕಳೆದ ಸರಣಿಯ ಜಯ ನಾಳಿನ ಪಂದ್ಯಕ್ಕೆ ಮತ್ತಷ್ಟು ಬಲ ತಂದುಕೊಟ್ಟಿದೆ ಎಂದು ತಂಡದ ನಾಯಕ ವಿರಾಟ್ ಕೊಹ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.  ಧೋನಿ ಒಬ್ಬ ಶ್ರೇಷ್ಠ ನಾಯಕ. ಅವರ ಸಲಹೆ ಪಡೆದೇ ತಂಡವನ್ನು ಮುನ್ನಡೆಸುತ್ತೇನೆ ಎಂದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin