ನೂರಾರು ಮಹಿಳೆಯರಿಂದ ಪೂರ್ಣಕುಂಭ ಸ್ವಾಗತ

21

ಮುಂಡಗೋಡ,ಮಾ.6- ಹಿರೇಮಠಾಧ್ಯಕ್ಷ ರುದ್ರಮುನಿ ಸ್ವಾಮಿಗಳ 55ನೇ ಜನ್ಮದಿನೋತ್ಸವದ ಅಂಗವಾಗಿ ಉಚಿತ ಸರ್ವಧರ್ಮಗಳ ಸಾಮೂಹಿಕ ವಿವಾಹ ಸಮಾರಂಭ ಹಾಗೂ ಶ್ರೀ ಗುರುಗೋವಿಂದ ಭಟ್ಟರು ಮತ್ತು ಶ್ರೀ ಸಂತ ಶಿಶುನಾಳ ಶರೀಫ ಶಿವಯೋಗಿಗಳ 7ನೇ ವರ್ಷದ ಜಾತ್ರಾ ಮಹೋತ್ಸವ ಇಲ್ಲಿಯ ಬಂಕಾಪುರ ರಸ್ತೆಯಲ್ಲಿರುವ ಶ್ರೀ ಗುರುಗೋವಿಂದ ಭಟ್ಟರು ಮತ್ತು ಶ್ರೀ ಸಂತ ಶಿಶುನಾಳ ಶರೀಫ ಶಿವಯೋಗಿಗಳ ಮಂದಿರದಲ್ಲಿ ನಿನ್ನೆ ವಿಜೃಂಭಣೆಯಿಂದ ಜರುಗಿತು.ಬೆಳಿಗ್ಗೆ ಹಳೂರ ಶ್ರೀ ಮಾರಿಕಾಂಬಾ ದೇವಿ ದೇವಸ್ಥಾನದಿಂದ ವಿಶ್ವ ಮಾನವತಾವಾದಿ, ದೇವಮಾನವ ಸಂತ ಶಿಶುನಾಳ ಶರೀಫ ಶಿವಯೋಗಿ ಶ್ರೀ ಗುರುಗೋವಿಂದ ಭಟ್ಟರ ಭಾವಚಿತ್ರಗಳ ಉತ್ಸವ ಮತ್ತು ನ್ಯಾಸರ್ಗಿ ಗ್ರಾಮದ ಭಕ್ತರು ತಯಾರಿಸಿ ತಂದ ರೊಟ್ಟಿ-ಬುತ್ತಿಗಳು ತುಂಬಿರುವ ಬಂಡಿ ಉತ್ಸವದ ಜೊತೆ ಹಿರೇಮಠಾಧ್ಯಕ್ಷ ಶ್ರೀ ರುದ್ರಮುನಿ ಸ್ವಾಮಿಗಳನ್ನು ಅಲಂಕರಿಸಿದ ಅಶ್ವ ರಥದಲ್ಲಿ ನೂರಾರು ಮಹಿಳೆಯರಿಂದ ಪೂರ್ಣ ಕುಂಭ ಸ್ವಾಗತದೊಡನೆ ಸಕಲ ವಾಧ್ಯಗಳೊಂದಿಗೆ ಮಂದಿರಕ್ಕೆ ಕರೆತರಲಾಯಿತು.

ನಂತರ ಮಂದಿರದಲ್ಲಿ ಉಭಯ ಶಿವ ಯೋಗಿಗಳ ಮಂಗಲ ಮೂರ್ತಿಗೆ ಮಹಾಪೂಜಾ ಮಂಗಳಾರತಿ ನೆರವೇರಿಸ ಲಾಯಿತು. ಮಧ್ಯಾಹ್ನ ಅಭಿಜಿತ ಲಗ್ನದ ಶುಭ ಮುಹೂರ್ತದಲ್ಲಿ ಸರ್ವಧರ್ಮಗಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪೂಜ್ಯ ಗುರುಗಳಿಂದ ನವ ದಂಪತಿಗಳಿಗೆ ಆಶೀರ್ವಚನ ನೀಡಲಾಯಿತು. ಬಳಿಕ ಮುಂಡಗೋಡ ಹಾಗೂ ನ್ಯಾಸರ್ಗಿ ಗ್ರಾಮದ ಸಮಸ್ತ ಸದ್ಬಕ್ತರಿಂದ ಅನ್ನಸಂತರ್ಪಣೆ ನಡೆಯಿತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin