ನೇಪಾಳದಲ್ಲಿ 5.5 ತೀವ್ರತೆಯ ಭೂಕಂಪ
ಕಠ್ಮಂಡು, ನ.28 : ಇಂದು ಬೆಳಗಿನ ಜಾವ 5 ಗಂಟೆ ಸುಮಾರಿಗೆ ನೇಪಾಳದಲ್ಲಿ 5.5 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಭೂಕಂಪನದ ಕೇಂದ್ರ ನಮ್ಚೆ ಬಜಾರ್ ನಿಂದ 19 ಕಿ.ಮೀ. ದೂರದಲ್ಲಿದ್ದು, ಭೂಮಿಯ 10 ಕಿ.ಮೀ. ಆಳದಲ್ಲಿದೆ ಎಂದು ಹೇಳಲಾಗಿದೆ. ಯಾವುದೇ ಆಸ್ತಿಪಾಸ್ತಿ ಹಾನಿ, ಸಾವುನೋವು ಸಂಭವಿಸಿದ ಬಗ್ಗೆ ಈವರೆಗೆ ವರದಿಯಾಗಿಲ್ಲ.
> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… : Eesanje News 24/7 ನ್ಯೂಸ್ ಆ್ಯಪ್ – Click Here to Download