ನೇಪಾಳ ಭೂಕಂಪದಲ್ಲಿ ನಿರಾಶ್ರಿತರಿಗೆ ಕಠ್ಮಂಡುವಿನಲ್ಲಿ ನಿರ್ಮಿಸಲಾಗಿದ್ದ ಬೃಹತ್ ಶಿಬಿರ ಧ್ವಂಸ
ಕಠ್ಮಂಡು, ಮಾ.16-ಹಿಮಾಲಯ ರಾಷ್ಟ್ರ ನೇಪಾಳದಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಬಂದೆರಗಿದ ವಿನಾಶಕಾರಿ ಭೂಕಂಪದಿಂದ ಸಂತ್ರಸ್ತರಾದವರಿಗೆ ರಾಜಧಾನಿ ಕಠ್ಮಂಡುವಿನಲ್ಲಿ ನಿರ್ಮಿಸಲಾಗಿದ್ದ ಬೃಹತ್ ಪರಿಹಾರ ಶಿಬಿರವನ್ನು ಪೊಲೀಸ್ ಭದ್ರತೆಯೊಂದಿಗೆ ಸರ್ಕಾರಿ ಅಧಿಕಾರಿಗಳು ಬುಲ್ಡೋಜರ್ಗಳ ನೆರವಿನಿಂದ ಧ್ವಂಸಗೊಳಿಸಿದ್ದಾರೆ. ಇಲ್ಲಿ ನೆಲೆಸಿರುವ 2,000ಕ್ಕೂ ಹೆಚ್ಚು ಮಂದಿ ತನ್ನ ಊರುಗಳಿಗೆ ಹಿಂದಿರುಗುವಂತೆ ಮಾಡುವುದಕ್ಕಾಗಿ ಈ ಬಲವಂತದ ಕ್ರಮವನ್ನು ಸರ್ಕಾರ ಕೈಗೊಂಡಿದೆ.
ನೇಪಾಳದಲ್ಲಿ 2015ರ ಏಪ್ರಿಲ್ನಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಸುಮಾರು 9,000 ಮಂದಿ ಮೃತಪಟ್ಟು, 10 ಲಕ್ಷಕ್ಕೂ ಹೆಚ್ಚು ಮನೆ-ಮಠಗಳು, ಸ್ಮಾರಕಗಳು ಮತ್ತು ಇತರ ಕಟ್ಟಡಗಳು ಧ್ವಂಸಗೊಂಡಿದ್ದವು. ನಿರಾಶ್ರಿತರಿಗಾಗಿ ಕಠ್ಮಂಡುವಿನ ಹೃದಯಭಾಗ ಅತ್ಯಂತ ಬೆಲೆಬಾಳುವ ಜಮೀನಿನಲ್ಲಿ ನಿರಾಶ್ರಿತರ ಶಿಬಿರವನ್ನು ನಿರ್ಮಿಸಲಾಗಿತ್ತು. ಇಲ್ಲಿ 2,000ಕ್ಕೂ ಹೆಚ್ಚು ಮಂದಿ ಆಶ್ರಯ ಪಡೆದಿದ್ದರು. ಎರಡು ವರ್ಷಗಳಾದರೂ ಇವರು ತಮ್ಮ ಊರುಗಳಿಗೆ ಹಿಂದಿರುಗದೇ ಶಿಬಿರದಲ್ಲಿ ಕಾಲಹರಣ ಮಾಡುತ್ತಿದ್ದರು.
ವಿಶ್ವದ ಏಕೈಕ ಹಿಂದೂ ರಾಷ್ಟ್ರ ನೇಪಾಳದಲ್ಲಿ ಉಲ್ಬಣಗೊಂಡಿರುವ ರಾಜಕೀಯ ಬಿಕ್ಕಟ್ಟಿನಿಂದಾಗಿ ಪುನನಿರ್ಮಾಣ ಕಾರ್ಯ ಮಂದಗತಿಯಲ್ಲಿ ಸಾಗಿದೆ. ಹೀಗಾಗಿ ಬಹು ಮುಖ್ಯ ಸ್ಥಳದಲ್ಲಿ ನೆಲೆಸಿರುವ ನಿರಾಶ್ರಿತರಿಗೆ ಪರಿಹಾರ ಹಣ ನೀಡಿ ಅವರವರ ಊರುಗಳಿಗೆ ಹಿಂದಿಗಿಸಲು ಈ ಕ್ರಮ ಕೈಗೊಳ್ಳಲಾಗಿದೆ. ನಿರಾಶ್ರಿತರ ಪರಿಹಾರ ಹಣ ಪಡೆದು ತಕ್ಷಣ ಸ್ವಗ್ರಾಮಗಳಿಗೆ ಹಿಂದಿರುಗಬೇಕೆಂದು ಅಧಿಕಾರಿಗಳು ಸೂಚಿಸಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS