ನೈತಿಕತೆ ಶಿಕ್ಷಣ ನೀಡುವಲ್ಲಿ ಶಿಕ್ಷಕರ ಪಾತ್ರ ಮುಖ್ಯ

Spread the love

6

ಇಳಕಲ್,ಫೆ.18- ಮಕ್ಕಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣದ ಜತೆಗೆ ಸಂಸ್ಕಾರಯುಕ್ತ, ನೈತಿಕತೆಯ ಶಿಕ್ಷಣ ನೀಡುವುದು ಅಗತ್ಯವಾಗಿದೆ ಎಂದು ನಗರಸಭೆ ಪೌರಾಯುಕ್ತ ಅರವಿಂದ ಜಮಖಂಡಿ ಹೇಳಿದರು. ಸಜ್ಜನ ವಿದ್ಯಾವಧ್ರ್ಯಕ ಸಂಘದ ಶಾಲಾ ಆವರಣದಲ್ಲಿ ನಡೆದ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ದೇಶಾಭಿಮಾನ ಶಿಸ್ತು, ಬೌದ್ಧಿಕ ಹಾಗೂ ಶಾರೀರಿಕ ಬೆಳವಣಿಗೆಯಲ್ಲಿ ಪಾಲಕರ ಹಾಗೂ ಶಿಕ್ಷಕರ ಪಾತ್ರ ಬಹು ಮುಖ್ಯವಾದುದಾಗಿದೆ ಎಂದರು.ಸಂಸ್ಥೆಯವರು ಇತರೇ ವೃತ್ತಿ ತರಬೇತಿ ಕೇಂದ್ರ, ಕೌಶಲ್ಯಾ ಭಿವೃದ್ಧಿ ಕೇಂದ್ರಗಳನ್ನು ತೆರೆದು ನಗರದ ಹಾಗೂ ಹಳ್ಳಿಯ ವಿದ್ಯಾವಂತರಿಗೆ ಉದ್ಯೋಗ ನೀಡುವಂತಹ ಕಾರ್ಯ ಚಟುವಟಿಕೆ ಹಮ್ಮಿಕೊಳ್ಳಬೇಕು. ದೇಶದ ಹಿರಿಯರು ವಿಶ್ವಕ್ಕೆ ಯೋಗ ಹಾಗೂ ಆಯುರ್ವೇದ ಕೊಡುಗೆಯನ್ನು ನೀಡಿದ್ದಾರೆ. ಅವುಗಳ ಪೋಷಣೆ, ಬೆಳವಣಿಗೆ ಮಾಡಬೇಕಾಗಿರುವುದು ಅಗತ್ಯವಾಗಿದೆ ಎಂದರು. ನಿವೃತ ಪ್ರಾಚಾರ್ಯ ಎಚ್.ಎಂ. ಬೂತನಾಳ ಮಾತನಾಡಿ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ. ಸಮಾಜದ ಮುಖಂಡರು ವಿದ್ಯಾದಾನ ನೀಡುತ್ತಿರುವುದು ಶ್ಲಾಘನೀಯವಾದುದು ಎಂದರು. ಸಂಸ್ಥೆಯ ಆಡಳಿತಾಧಿಕಾರಿ ಎನ್.ಎಂ. ಚಿನ್ನಣ್ಣವರ ಮಾತನಾಡಿದರು. ಪುರಸಭೆ ಮಾಜಿ ಅಧ್ಯಕ್ಷ ಮಲ್ಲಣ್ಣ ಕಂಪ್ಲಿ, ಎಂ.ಬಿ. ಸಜ್ಜನ, ಆರ್.ಪಿ ಚನ್ನಗೌಡ್ರ, ಎಂ.ಎಸ್ ಸಜ್ಜನ ಅಭಿಷೇಕ ವಗ್ಗಾ. ಭರತ ದೂಪದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin