ನೋಟ್ ಬ್ಯಾನ್ ಎಫೆಕ್ಟ್ : ಅಂಚೆ ಕಚೇರಿಗಳಿಗೆ ಹರಿದು ಬಂತು 32,631 ಕೋಟಿ ರೂ. ಠೇವಣಿ

Post-Office

ನವದೆಹಲಿ,ನ.27-ಗರಿಷ್ಠ ಮೌಲ್ಯದ ನೋಟು ಗಳನ್ನು ಅಮಾನ್ಯಗೊಳಿಸಿದ ನಂತರ ದೇಶದ 1.55 ಲಕ್ಷ ಅಂಚೆ ಕಚೇರಿಗಳಿಗೆ ಒಟ್ಟು 32,631 ಕೋಟಿ ರೂ.ಗಳ ಠೇವಣಿ ಸಂಗ್ರಹವಾಗಿದೆ. ಈ ಅಂಚೆ ಕಚೇರಿಗಳಲ್ಲಿ ನ.10 ಮತ್ತು 24ರ ನಡುವೆ 3,680 ಕೋಟಿ ರೂ.ಗಳ ಹಳೆಯ ನೋಟುಗಳನ್ನು ಸಹ ವಿನಿಮಯ ಮಾಡಲಾಗಿದೆ ಎಂದು ಅಂಚೆ ಇಲಾಖೆಯ ಕಾರ್ಯದರ್ಶಿ ಬಿ.ವಿ.ಸುಧಾಕರ್ ತಿಳಿಸಿದ್ದಾರೆ. 500 ಮತ್ತು 1000 ನೋಟುಗಳ ರದ್ದತಿ ನಂತರ ಅಂಚೆ ಕಚೇರಿಗಳಿಗೆ ಭಾರೀ ಮೊತ್ತದ ಠೇವಣಿ ಹರಿದುಬರುತ್ತಿದ್ದು , ಗ್ರಾಮೀಣ ಪ್ರದೇಶಗಳ 1.30 ಲಕ್ಷ ಅಂಚೆ ಕಚೇರಿಗಳಿದ್ದು ಉತ್ತಮ ಠೇವಣಿ ಸಂಗ್ರಹವಾಗಿದೆ ಎಂದು ಅವರು ಹೇಳಿದರು. ಇದೇ ಅವಧಿಯಲ್ಲಿ ಅಂಚೆ ಕಚೇರಿಗಳಿಂದ 3,583 ಕೋಟಿ ರೂ.ಗಳನ್ನು ಡ್ರಾ ಮಾಡಿದ್ದಾರೆ ಎಂದು ಸುಧಾಕರ್ ಅಂಕಿಅಂಶ ನೀಡಿದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin