ನೋಟ್ ಬ್ಯಾನ್ ಎಫೆಕ್ಟ್ : ಕೇವಲ 500 ರೂ. ಖರ್ಚಿನಲ್ಲಿ ಮದುವೆ ಮಾಡಿಕೊಂಡ ಜೋಡಿ…!

Married-02

ಸೂರತ್, ನ.25-ಮಾಜಿ ಸಚಿವ, ಗಣಿ ಧಣಿ ಜರ್ನಾಧನ ರೆಡ್ಡಿ 500 ಕೋಟಿ ರೂ.ಗಳಲ್ಲಿ ತಮ್ಮ ಪುತ್ರಿಯ ವೈಭವೋಪೇತ ಮದುವೆ ಮಾಡಿ ಸುದ್ದಿಯ ಸದ್ದು ಮಾಡಿದ್ದರು. ಆದರೆ ಇದಕ್ಕೆ ತೀರಾ ವೈರುಧ್ಯವಾಗಿ ಸೂರತ್‍ನಲ್ಲಿ ಕೇವಲ 500 ರೂ.ಗಳಲ್ಲಿ ಜೋಡಿಯೊಂದಿಗೆ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ.  ಸೂರತ್‍ನ ದಕ್ಷಾ ಮತ್ತು ಭರತ್ ಪರ್ಮರ್ ಅತ್ಯಂತ ಕಡಿಮೆ ವೆಚ್ಚದಲ್ಲಿ ವಿವಾಹವಾದ ಆದರ್ಶ ಜೋಡಿ. ನೋಟು ರದ್ದತಿಗೆ ಮೊದಲೇ ಇವರ ವಿವಾಹ ನಿಗದಿಯಾಗಿತ್ತು. ಆದರೆ, ಇದರಿಂದ ಉಂಟಾದ ಹಣಕಾಸು ಮುಗ್ಗಟ್ಟು ಮತ್ತು ಕರೆನ್ಸಿ ವಿನಿಮಯ ಗೊಂದಲಗಳಿಂದಾಗಿ ಅತ್ಯಂತ ಸರಳ ರೀತಿಯಲ್ಲಿ ಮದುವೆಯಾಗಲು ನಿರ್ಧರಿಸಿದ ದಕ್ಷಾ ಮತ್ತು ಭರತ್ ಕೇವಲ 500 ರೂ.ಗಳಲ್ಲೇ ಸತಿ-ಪತಿಗಳಾಗಿದ್ಧಾರೆ. ಮದುವೆಯಲ್ಲಿ ಭಾಗವಹಿಸಿದ್ದ ಅತಿಥಿಗಳಿಗೆ ಕೇವಲ ನೀರು ಮತ್ತು ಟೀ ಪೂರೈಕೆ ಮಾಡಿ ಮಿತವ್ಯಯದ ಮದುವೆಗೆ ಸಾಕ್ಷಿಯಾದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin